ಉಡುಪಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ; ವಿವಿಧ ಸ್ಪರ್ಧೆ ಆಯೋಜನೆ

Update: 2024-08-29 15:07 GMT

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ.ಪ್ರ.ದ.ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಲಯನ್ಸ್ ಕ್ಲಬ್ ಉಡುಪಿ ಇವರ ಸಂಯುಕ್ತ ಆಶ್ರಯ ದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ, ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಹಾಗೂ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ನಡೆಸುವ ಕ್ರೀಡಾಪಟು ಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ಇಂದು ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ಲೂಯಿಸ್ ಲೋಬೋ, ಕಾರ್ಯದರ್ಶಿ ಪ್ರಸಾದ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗಾಗಿ 800ಮೀ. ಹಾಗೂ 1500 ಮೀ. ಓಟ, ಸಂಗೀತ ಕುರ್ಚಿ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಬಾಲಕಿಯರ ವಿಭಾಗ: 800 ಮೀ.ಓಟದಲ್ಲಿ ಸ್ಪೂರ್ತಿ (ಡಿವೈಇಎಸ್) ಪ್ರಥಮ, ವೈಷ್ಣವಿ (ಡಿವೈಇಎಸ್) ದ್ವಿತೀಯ, ಹಾಗೂ ಧನ್ವಿ ಎಸ್ (ಯುನೈಟೆಡ್ ಅಥ್ಲೆಟಿಕ್ಸ್ ಗ್ರೂಪ್) ತೃತೀಯ ಸ್ಥಾನ ಪಡೆದರು. 1500ಮೀ. ಓಟ ಸ್ಪರ್ಧೆಯಲ್ಲಿ ವರ್ಷಾ (ಉಡುಪಿ ಟ್ರ್ಯಾಕ್ ಫೀಲ್ಡ್) ಪ್ರಥಮ, ಸುಜಾತಾ (ಡಿವೈಇಎಸ್) ದ್ವಿತೀಯ, ಅನನ್ಯಾ ಬಿ. (ಡಿವೈಇಎಸ್) ತೃತೀಯ ಸ್ಥಾನ ಪಡೆದರು.

ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಜ್ಯೋತಿ ಸಿ (ಡಿವೈಇಎಸ್) ಪ್ರಥಮ, ಧನ್ವಿ ಎಸ್ (ಯುನೈಟೆಡ್ ಅಥ್ಲೆಟಿಕ್ಸ್ ಗ್ರೂಪ್) ದ್ವಿತೀಯ, ಪ್ರಗತಿ ಎಸ್ ಬಿ(ಡಿವೈಇಎಸ್) ತೃತೀಯ ಸ್ಥಾನ ಪಡೆದರೆ, ಬಾಲಕಿಯರ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಡಿವೈಇಎಸ್ ಸೀನಿಯರ್ ಮತ್ತು ಜೂನಿಯರ್ ತಂಡಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವು.

ಬಾಲಕರ ವಿಭಾಗ: 800 ಮೀ. ಓಟದಲ್ಲಿ ವಿಕಾಸ್ ಕುಮಾರ್ ಗುಪ್ತ (ಉಡುಪಿ ಟ್ರ್ಯಾಕ್ ಫೀಲ್ಡ್) ಪ್ರಥಮ, ಆಕಾಶ್ ಖಾರ್ವಿ (ಡಿವೈಇಎಸ್) ದ್ವಿತೀಯ, ಹರೀಶ್ ನಾಗರಾಜ್ (ಡಿವೈಇಎಸ್) ತೃತೀಯ ಸ್ಥಾನ ಪಡೆದರು. 1500 ಮೀ. ಓಟದಲ್ಲಿ ನಾಗರಾಜ (ಡಿವೈಇಎಸ್) ಪ್ರಥಮ, ಪ್ರಜ್ವಲ್ ಗೋಣ(ಡಿವೈಇಎಸ್) ದ್ವಿತೀಯ, ರಾಘವೇಂದ್ರ(ಡಿವೈಇಎಸ್) ತೃತೀಯ ಸ್ಥಾನ ಪಡೆದರು.

ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಡಿವೈಇಎಸ್ ತಂಡ ಪ್ರಥಮ ಸ್ಥಾನ ಹಾಗೂ ಉಡುಪಿ ಟ್ರ್ಯಾಕ್ ಫೀಲ್ಡ್ ತಂಡವು ದ್ವಿತೀಯ ಸ್ಥಾನ ಪಡೆದವು. ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News