ಅಂಗನವಾಡಿ ಶಿಕ್ಷಕಿ ಆತ್ಮಹತ್ಯೆ

Update: 2024-11-15 15:59 GMT

ಕಾರ್ಕಳ, ನ.15: ಅನಾರೋಗ್ಯದಿಂದ ಒಂದೂವರ ತಿಂಗಳ ಹಿಂದೆ ಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಗ್ಗೆ ಮಿಯ್ಯಾರು ಗ್ರಾಮದಿಂದ ವರದಿಯಾಗಿದೆ.

ಮಿಯ್ಯಾರು ಕುಂಟಿಬೈಲು ಮಂಜಡ್ಕ ನಿವಾಸಿ ಸೌಮ್ಯ (39) ಮೃತರು. ಇವರು ಇಂದು ಬೆಳಗ್ಗೆ 7:10ರಿಂದ 7:30ರ ನಡುವಿನ ಅವಧಿಯಲ್ಲಿ ವಾಸದ ಮನೆಯ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News