ಉಡುಪಿ: ಅ.31ರೊಳಗೆ ಖಾಸಗಿ ಬಸ್ ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸಲು‌ ಪೊಲೀಸ್ ಇಲಾಖೆ ಸೂಚನೆ

Update: 2024-09-25 17:02 GMT

ಉಡುಪಿ, ಸೆ.25: ಎಲ್ಲಾ ಖಾಸಗಿ ಬಸ್ಗಳಿಗೆ ಕಡ್ಡಾಯವಾಗಿ ಅ.31ರೊಳಗೆ ಬಾಗಿಲು ಅಳವಡಿಸಬೇಕು‌ ಮತ್ತು ಯಾವುದೇ ಕಾರಣಕ್ಕೂ ಪುಟ್‌ ಬೋರ್ಡ್‌ನಲ್ಲಿ ಪ್ರಯಾಣಿಸಲು ಪ್ರಯಾಣಿಕರಿಗೆ ಅವಕಾಶ ನೀಡಬಾರದು ಎಂದು ಮಲ್ಪೆ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಇಂದು ನಡೆದ ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಮಾಲಕರ ಸಭೆಯಲ್ಲಿ ಸೂಚನೆ ನೀಡಲಾಯಿತು.

ಬಸ್ಸುಗಳಲ್ಲಿ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸುವಂತೆ ಮತ್ತು ಚಾಲಕರು ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸ ದಂತೆ, ಬಸ್ ಗಳಲ್ಲಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಸಿ.ಸಿ ಕ್ಯಾಮೆರಾ ಅಳವಡಿಸುವಂತೆ, ಮಹಿಳೆಯರು ಮತ್ತು ಮಕ್ಕಳೊಂದಿಗೆ ಬಸ್ಸಿನ ಚಾಲಕ ಮತ್ತು ಕಂಡೆಕ್ಟರ್ ಗೌರವಯುತವಾಗಿ ನಡೆದುಕೊಳ್ಳುವಂತೆ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆಗಳನ್ನು ನೀಡಲಾಯಿತು.

ಸಭೆಯಲ್ಲಿ ಉಡುಪಿ ಡಿವೈಎಸ್‌ಪಿ ಡಿ.ಟಿ ಪ್ರಭು , ಪ್ರೊಬೇಶನರಿ ಡಿವೈಎಸ್‌ಪಿ ಗೀತಾ ಪಾಟೀಲ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಲ್.ಪಿ ನಾಯ್ಕ್, ಮೋಟಾರು ವಾಹನ ನಿರೀಕ್ಷಕ ಮಾರುತಿ ನಾಯ್ಕ್, ಮಲ್ಪೆ ವೃತ್ತ ನಿರೀಕ್ಷಕ ಮಂಜು ನಾಥ್ ಎಂ. ಮತ್ತು ಉಡುಪಿ ಸಂಚಾರ ಪೊಲೀಸ್ ಠಾಣಾ ಪಿಎಸ್‌ಐ ಸುದರ್ಶನ್ ದೊಡ್ಡಮನಿ, ಉಡುಪಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಖಾಸಗಿ ಬಸ್ ಗಳ ಮಾಲಕರು ಮತ್ತು ಮ್ಯಾನೇಜರ್ ಗಳು ಹಾಜರಿದ್ದರು.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News