ಉಡುಪಿ: ಟೆಂಪೋ ಢಿಕ್ಕಿ; ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತ್ಯು

Update: 2023-11-07 14:01 GMT

ಮಣಿಪಾಲ, ನ.7: ಟೆಂಪೋವೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಇಂದು ಸಂಜೆ 6.30ರ ಸುಮಾರಿಗೆ ಅಲೆವೂರು -ಮಣಿಪಾಲ ರಸ್ತೆಯ ವಿಠ್ಠಲ ಸಭಾಭವನದ ಬಳಿ ನಡೆದಿದೆ.

ಮೃತರನ್ನು ಮಣಿಪಾಲ ಪ್ರಗತಿನಗರದ ಮುಹಮ್ಮದ್ ತನ್ಸಿಲ್(28) ಎಂದು ಗುರುತಿಸಲಾಗಿದೆ.

ಅಲೆವೂರು ಕಡೆಯಿಂದ ಮಂಚಿ ಕಡೆಗೆ ಹೋಗುತ್ತಿದ್ದ ಸ್ಕೂಟರ್‌ಗೆ ಎದುರಿನಿಂದ ಬಂದ ಟೆಂಪೋ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ತನ್ಸಿಲ್ ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News