ಉಡುಪಿ: ಟೀಕೆಟು ರಹಿತ ಪ್ರಯಾಣ; ಅಪ್ರಾಪ್ತ ಅಣ್ಣ ತಂಗಿ ವಶಕ್ಕೆ

Update: 2024-09-14 07:31 GMT

ಉಡುಪಿ, ಸೆ.14: ರೈಲಿನಲ್ಲಿ ಟಿಕೆಟ್ ಇಲ್ಲದೆ ದಿವ್ಯಾಂಗರಿಗೆ  ಮೀಸಲಿರಿಸಿದ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಬಾಲಕ ಬಾಲಕಿಯನ್ನು ಪ್ರಯಾಣಚೀಟಿ ತಪಸಾಣಾಧಿಕಾರಿ ವಶಕ್ಕೆ ಪಡೆದ ಘಟನೆ ಶುಕ್ರವಾರ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

ಪ್ರಯಾಣ ಚೀಟಿ ತಪಸಾಣಾಧಿಕಾರಿ ಕೆ.ವಾಸುದೇವ್ ಪೈ, ಅಪ್ರಾಪ್ತ ಮಕ್ಕಳನ್ನು ಕಾನೂನು ಪ್ರಕ್ರಿಯೆ ನಡೆಸಲು ರೈಲ್ವೆ ಆರ್.ಪಿ.ಎಫ್ ಸುಧೀರ್ ಶೆಟ್ಟಿ ಸಮ್ಮುಖ ಹಾಜರುಪಡಿಸಿದರು. ಇವರಿಬ್ಬರು ಸಹೋದರ ಸಹೋದರಿಯರಾಗಿದ್ದು, ಬೆಂಗಳೂರು ಬ್ಯಾಟರಾಯನಪುರದ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ನಿವಾಸಿಗಳೆಂದು ತಿಳಿದುಬಂದಿದೆ.

ಇವರು ಹೆತ್ತವರಿಗೆ ತಿಳಿಸದೆ ಮನೆಬಿಟ್ಟು ಬಂದಿದ್ದು, ಮಕ್ಕಳ ಬ್ಯಾಗುಗಳಲ್ಲಿ ಸ್ಪಾನರುಗಳು ಇದ್ದವೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ವಿಚಾರಣೆ ಪ್ರಕ್ರಿಯೆ ಮುಗಿದ ಬಳಿಕ ರೈಲ್ವೇ ಪೋಲಿಸರು ಹೆತ್ತವರಿಗೆ ವಿಷಯ ಮುಟ್ಟಿಸಿದ್ದು, ಮಕ್ಕಳನ್ನು ನಿಟ್ಟೂರಿನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ರಕ್ಷಣಾ ಘಟಕದ ಕೇಸ್ ವರ್ಕರ್ ಪ್ರಕಾಶ್, ಅಂಬಿಕಾ ಎಸ್. ಸಮಿತಿಗೆ ಒಪ್ಪಿಸಿದ್ದಾರೆ. ಕಾರ್ಯಚರಣೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಕಾನೂನು ಪ್ರಕ್ರಿಯೆ ಸಂದರ್ಭ ತನಿಖಾಧಿಕಾರಿ ಜಿನಾ ಪಿಂಟೋ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News