ವಾರಾಂತ್ಯ: ಮಲ್ಪೆ ಬೀಚ್, ಸೈಂಟ್ ಮೇರಿಸ್ ದ್ವೀಪದಲ್ಲಿ ಜನಸಾಗರ!

Update: 2023-10-22 14:46 GMT

ಮಲ್ಪೆ, ಅ.22: ನಿರ್ಬಂಧದ ತೆರವಿನ ಬಳಿಕ ಮೊದಲ ವಾರಾಂತ್ಯ ಹಾಗೂ ದಸರಾ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ಪ್ರಮುಖ ಪ್ರವಾಸಿ ತಾಣವಾದ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಜನ ಸಾಗರವೇ ಹರಿದು ಬಂದಿವೆ.

ಪ್ರತಿವರ್ಷ ಮೇ 15ರಿಂದ ಸೆಪ್ಟೆಂಬರ್ 15ರವರೆಗೆ ಸೈಂಟ್ ಮೇರಿಸ್ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸು ತ್ತದೆ. ಈ ಬಾರಿ ಕಾರಣಾಂತರದಿಂದ ಒಂದು ತಿಂಗಳು ವಿಳಂಬವಾಗಿ ನಿರ್ಬಂಧ ತೆರವು ಮಾಡಲಾಗಿತ್ತು. ಹೀಗಾಗಿ ಪ್ರಥಮ ವಾರಾಂತ್ಯದಲ್ಲಿ ಇಲ್ಲಿನ ಬೀಚ್, ಸೀವಾಕ್, ಸೈಂಟ್ ಮೇರಿಸ್ ದ್ವಿಪ ಗಳಲ್ಲಿ ಜನಸ್ತೋಮವೇ ನೆರೆದಿತ್ತು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಸಾವಿರಾರು ಮಂದಿ ಪ್ರವಾಸಿಗರು ಬಹುಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ವಾಟರ್ ಸ್ಪೋರ್ಟ್ಸ್, ಬೀಚ್ ಗೇಮ್ಸ್ ಹಾಗೂ ಮೋಜು ಮಸ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಜೀವರಕ್ಷಕ ದಳದ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು.

ಮಳೆಗಾಲದ ಬಳಿಕ ಪ್ರವೇಶ ಆರಂಭಗೊಂಡ ಮೊದಲ ರವಿವಾರ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಲು ಪ್ರವಾಸಿಗರ ದಂಡೇ ಆಗಮಿಸಿತ್ತು. ಬೋಟಿನಲ್ಲಿ ದ್ವೀಪಕ್ಕೆ ತೆರಳಲು ಸೀವಾಕ್ ಬಳಿ ಜನಸ್ತೋಮವೇ ಸೇರಿತ್ತು. ಬೋಟಿನವರ ಪ್ರಕಾರ ಇಂದು ಒಂದೇ ದಿನ 3-4ಸಾವಿರ ಮಂದಿ ದ್ವೀಪಕ್ಕೆ ತೆರಳಿ ವೀಕ್ಷಣೆ ಮಾಡಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಜನ ಮಲ್ಪೆಗೆ ಆಗಮಿಸಿದ ಪರಿಣಾಮ ಸಂಜೆ ವೇಳೆ ಪಾರ್ಕಿಂಗ್ ಸಮಸ್ಯೆ, ರಸ್ತೆಯಲ್ಲಿ ವಾಹನ ದಟ್ಟಣೆಯಿಂದ ತೊಂದರೆ ಅನುಭವಿಸುವಂತಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News