21 ಹಿರಿಯ ಕಲಾವಿದರಿಗೆ 'ಯಕ್ಷಗಾನ ಕಲಾರಂಗ ಪ್ರಶಸ್ತಿ-2023'

Update: 2023-11-07 11:04 GMT

ಉಡುಪಿ, ನ.7: ಉಡುಪಿ ಯಕ್ಷಗಾನ ಕಲಾರಂಗವು ಪ್ರತಿವರ್ಷದಂತೆ ಈ ಬಾರಿಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ತೆಂಕು ಹಾಗೂ ಬಡಗುತಿಟ್ಟಿನ 21 ಹಿರಿಯ ಸಾಧಕ ಯಕ್ಷಗಾನ ಕಲಾವಿದರು ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

'ಡಾ.ಬಿ.ಬಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ': ಚಿದಂಬರ ಬಾಬು ಕೊಣಂದೂರು, ಶಿವಮೊಗ್ಗ. 'ಪ್ರೊ.ಬಿ.ವಿ.ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ': ಎಚ್.ಗೋವಿಂದ ಉರಾಳ ಕೋಟ. 'ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ.ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ': ವಸಂತ ಶೆಟ್ಟಿ, ಮುಂಡ್ಕೂರು. 'ಬಿ.ಜಗಜ್ಜೀವನದಾಸ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ': ಕೆ.ಎಸ್. ಶಿವಶಂಕರ ಭಟ್, ತೀರ್ಥಹಳ್ಳಿ. 'ಕೆ.ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಸಂಜೀವ ಕೊಠಾರಿ ಬೈಂದೂರು. 'ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ': ಸೀತೂರು ಎಚ್.ಎಸ್.ಅನಂತ ಪದ್ಮನಾಭರಾವ್, ಚಿಕ್ಕಮಗಳೂರು. 'ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ': ಗಣಪತಿ ಭಾಗ್ವತ, ಕಂವಾಳೆ ಯಲ್ಲಾಪುರ. 'ಮಾರ್ವಿ ರಾಮಕೃಷ್ಣ ಹೆಬ್ಬಾರ- ಮಾರ್ವಿ ವಾದಿರಾಜ ಹೆಬ್ಬಾರ ಸ್ಮರಣಾರ್ಥ ಪ್ರಶಸ್ತಿ': ಎಂ.ರಘುರಾಮ ಮಡಿವಾಳ ಮಂದಾರ್ತಿ. 'ಸಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ': ಕೋಡಿ ವಿಶ್ವನಾಥ ಗಾಣಿಗ, ಹಾಲಾಡಿ. 'ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ': ಅಶೋಕ ಭಟ್ ಸಿದ್ದಾಪುರ. 'ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ': ಸುಬ್ರಾಯ ನಾರಾಯಣ ಭಂಡಾರಿ ಗುಣವಂತೆ. 'ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ': ವಿಠಲ ಕುಲಾಲ ಚೋರಾಡಿ, ಉಡುಪಿ. 'ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ': ವೈ.ವಾಸುದೇವ ರಾವ್ ಎರ್ಮಾಳು. 'ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿ': ಪ್ರಭಾಕರ ಹೆಗಡೆ ಈಚಲಕೊಪ್ಪ, ಸಾಗರ. 'ಮಾನ್ಯ ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ': ಮಧೂರು ರಾಧಾಕೃಷ್ಣ ನಾವಡ, ಕಾಸರಗೋಡು. 'ಎಚ್.ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ': ರತ್ನಾಕರ ಆಚಾರ್ಯ ಪಡುಬಿದ್ರೆ. 'ಕಡಂದೇಲು ಪುರುಷೋತ್ತಮ ಭಟ್ ಪ್ರಶಸ್ತಿ': ಗುಂಡಿಮಜಲು ಗೋಪಾಲ ಭಟ್ ಬಂಟ್ವಾಳ. 'ಕಡತೋಕ ಕೃಷ್ಣ ಭಾಗವತ್ ಪ್ರಶಸ್ತಿ': ತ್ರ್ಯಂಬಕ ಹೆಗಡೆ ಇಡುವಾಣಿ ಸಾಗರ. 'ಬಿ.ಪಿ.ಕರ್ಕೇರಾ ಪ್ರಶಸ್ತಿ': ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಬೆಳ್ತಂಗಡಿ. 'ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ': ವಸಂತಗೌಡ ಕಾಯರ್ತಡ್ಕ, ಬೆಳ್ತಂಗಡಿ. 'ಪ್ರಭಾವತಿ ವಿ.ಶೆಣೈ -ಯು.ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ': ಶ್ರೀಧರ ಪೂಜಾರಿ ಪಂಜಾಜೆ, ಬಂಟ್ವಾಳ.

ಯಕ್ಷಚೇತನ ಪ್ರಶಸ್ತಿಯನ್ನು ಸಂಸ್ಥೆಯ ಹಿರಿಯ ಕಾರ್ಯಕರ್ತ ವಿಜಯ ಕುಮಾರ್ ಮುದ್ರಾಡಿ ಇವರಿಗೆ ನೀಡಲಾಗುವುದು. ಯಕ್ಷಚೇತನ ಪ್ರಶಸ್ತಿಯನ್ನು ಹೊರತು ಪಡಿಸಿ ಉಳಿದೆಲ್ಲಾ ಪ್ರಶಸ್ತಿಗಳು ತಲಾ 20,000ರೂ. ನಗದು ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನ.18ರಂದು ಸಂಜೆ 5ಗಂಟೆಯಿಂದ 7ರವರೆಗೆ ಶ್ರೀಕ್ಷೇತ್ರ ಕಟೀಲಿನ ಸರಸ್ವತೀ ಸದನದಲ್ಲಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News