ಹೊಸಪೇಟೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

Update: 2024-12-18 09:41 GMT
ಹೊಸಪೇಟೆ | ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ
  • whatsapp icon

ಹೊಸಪೇಟೆ : ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕಿನಿಂದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ವಿಜಯನಗರ ಜಿಲ್ಲಾ ಅಂಗನವಾಡಿ ಮತ್ತು ಸಿ. ಐ.ಟಿ.ಯು.ಜಿಲ್ಲಾ ಸಂಚಾಲಕಿ ಕೆ.ನಗರತ್ನಮ್ಮ ಅವರು ಮಾತನಾಡಿ, "ಕೋವಿಡ್‌ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದೇವೆ. ಎಂತಹದ್ದೇ ಕಷ್ಟದ ಸಂದರ್ಭದಲ್ಲೂ ಎಲ್ಲಾ ಇಲಾಖೆಯ ಜೊತೆಗಿದ್ದು, ಅವರ ಜೊತೆ ಜೊತೆಯಲ್ಲೇ ಕಾರ್ಯನಿರ್ವಹಿಸಿದ್ದೇವೆ. ಸರಕಾರದ ವಿವಿಧ ಯೋಜನೆಗಳು ಮತ್ತು ಬಾಣಂತಿಯರ ರಕ್ಷಾ ಕವಚದಂತೆ ಹಗಲು-ರಾತ್ರಿ ಎನ್ನದೆ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸುವುದಾಗಲಿ, ಚಿಕಿತ್ಸೆ ಕೊಡಿಸುವುದರಲ್ಲಾಗಲಿ ಯಾವುದರಲ್ಲೂ ನಾವು ಅಂಗನವಾಡಿ ಕಾರ್ಯಕರ್ತೆಯರು ಹಿಂದೇಟು ಹಾಕಲಿಲ್ಲ. ಆದರೆ ಸರಕಾರ ನಮ್ಮ ಜೊತೆ ತಾರತಮ್ಯ ಮಾಡುತ್ತಿದೆ, ಸರಕಾರ 6ನೇ ವೇತನಕ್ಕೆ ನಮಗೆ ಆದ್ಯತೆ ಮಾಡಿಕೊಡಬೇಕು. ಸರಕಾರ ಆದಷ್ಟು ಬೇಗ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟದ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ" ಎಂದು ಎಚ್ಚರಿಕೆ ನೀಡಿದರು.

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News