ಹೊಸಪೇಟೆ | ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ
Update: 2025-01-30 12:55 IST

ಹೊಸಪೇಟೆ : ಚಾಕುವಿನಿಂದ ಇರಿದು ವ್ಯಕ್ತಿಯೋರ್ವನ್ನು ಹತ್ಯೆ ಮಾಡಿರುವ ಘಟನೆ ಹೊಸಪೇಟೆ ನಗರದ ಬೈಪಾಸ್‌ನಲ್ಲಿರುವ ಭಟ್ರಳ್ಳಿ ಆಂಜನೇಯ ದೇಗುಲದ ದ್ವಾರ ಬಳಿ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ಹೊಸಪೇಟೆ ನಿವಾಸಿ ರಾಮಲಿ( 40) ಎಂದು ಗುರುತಿಸಲಾಗಿದೆ. ಎದೆ, ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಸ್ಥಳಕ್ಕೆ ಹೊಸಪೇಟೆ ಗ್ರಾಮೀಣ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.