ವಿಜಯನಗರ | ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ನಿರುದ್ಯೋಗ ಯುವಕ, ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಅಹ್ವಾನ

ವಿಜಯನಗರ (ಹೊಸಪೇಟೆ) : 2024-25 ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ವಿವಿಧ ಕೌಶಲ್ಯಭಿವೃದ್ಧಿ(ತಾಂತ್ರಿಕ ನೈಪುಣ್ಯತೆ) ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹೆಚ್.ವಿ.ಮಂಜುನಾಥ ತಿಳಿಸಿದ್ದಾರೆ.
ಸರ್ಕಾರದಿಂದ ಅನುಮೋದನೆ ಪಡೆದ ಹಾಗೂ ಕೆಜಿಟಿಟಿಐ (ಕರ್ನಾಟಕ ಜರ್ಮನ್ ಟೆಕ್ನಿನಿಕಲ್ ತರಬೇತಿ ಸಂಸ್ಥೆ) ತರಬೇತಿ ನೀಡಲು ಕಾರ್ಯಾದೇಶ ನೀಡಲಾಗಿದೆ.
ತರಬೇತಿ ನೀಡಲಿರುವ ಕೋರ್ಸ್ ಗಳ ವಿವರ :
1.ಸ್ವಯಂ ಉದ್ಯೋಗ ಟೈಲರಿಂಗ್ (2 ತಿಂಗಳು)
2.ಸಹಾಯಕ ಸೌಂದರ್ಯ ಚಿಕಿತ್ಸಕ (2 ತಿಂಗಳು),
3.ಡೇಟಾ ಎಂಟ್ರಿ ಆಪರೇಟರ್ (2 ತಿಂಗಳು)
4.ಫ್ಯಾಷನ್ ಡಿಸೈನರ್ (1 ತಿಂಗಳು) ಅವಧಿಗೆ ತರಬೇತಿಗಳನ್ನು ನೀಡಲಾಗುತ್ತದೆ.
ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದ ನಿರುದ್ಯೋಗಿ ಆಸಕ್ತ ಅರ್ಹ ಅಭ್ಯರ್ಥಿಗಳು ಎ.3 ರಿಂದ ವಿಜಯನಗರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಮಟ್ಟದ ಕಚೇರಿಗಳಿಗೆ ಭೇಟಿ ನೀಡಿ ನಿಗಧಿತ ಅರ್ಜಿ ನಮೂನೆ ಪಡೆದು ಎ.15 ರೊಳಗಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.