ವಿಜಯನಗರ | ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ : ಪ್ರಕರಣ ದಾಖಲು

ವಿಜಯನಗರ(ಹೊಸಪೇಟೆ) : ತಾಲೂಕಿನ ಕಮಲಾಪುರ ಹೆಚ್‌ಪಿಸಿ ಬಳಿಯಿರುವ ಫೋರ್‌ವೇ ಕಾಲುವೆಯ ನೀರಿನಲ್ಲಿ ಜ.1 ರಂದು ಸುಮಾರು 45 ರಿಂದ 50 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಕಮಲಾಪುರ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಮೃತನ ಚಹರೆ : 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ನಶಿಪುಡಿ ಬಣ್ಣದ ಅಡ್ಡಗೆರೆವುಳ್ಳ ಚಡ್ಡಿ, ಕರಿ ಮತ್ತು ಹಸಿರು ಮಿಶ್ರಿತ ಬಣ್ಣದ ಉಡುದಾರ, ಕುತ್ತಿಗೆಯಲ್ಲಿ ಮಣಿ ಸರ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ. ನಂ: 9480805700, ವಿಜಯನಗರ ಎಸ್ಪಿ ಮೊ.ಸಂ: 9480805701, ಹೆಚ್ಚುವರಿ ಎಸ್ಪಿ ಮೊ.ಸಂ: 9480805702, ಡಿಎಸ್‌ಪಿ ಹೊಸಪೇಟೆ ಉಪವಿಭಾಗ ಮೊ.ಸಂ: 9480805720, ಸಿಪಿಐ ಹಂಪಿ ವೃತ್ತ, ಕಮಲಾಪುರ ಮೊ.ಸಂ: 9480805732 ಮತ್ತು ಕಮಲಾಪುರ ಪಿಎಸ್‌ಐ ಮೊ.ಸಂ: 9480805762 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕಮಲಾಪುರ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.