ವಿಜಯನಗರ | ಧ್ವಜಾರೋಹಣದ ಬೆನ್ನಲ್ಲೇ ಧ್ವಜಸ್ತಂಭದಿಂದ ಜಾರಿ ಬಿದ್ದ ಬೃಹತ್‌ ತ್ರಿವರ್ಣ ಧ್ವಜ

Update: 2025-01-26 07:56 GMT
ವಿಜಯನಗರ | ಧ್ವಜಾರೋಹಣದ ಬೆನ್ನಲ್ಲೇ ಧ್ವಜಸ್ತಂಭದಿಂದ ಜಾರಿ ಬಿದ್ದ ಬೃಹತ್‌ ತ್ರಿವರ್ಣ ಧ್ವಜ
  • whatsapp icon

ವಿಜಯನಗರ : 76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದ ಕೆಲ ಸಮಯದಲ್ಲೇ ಬೃಹತ್ ತ್ರಿವರ್ಣ ಧ್ವಜವು ಸ್ತಂಭದಿಂದ ಜಾರಿ ಬಿದ್ದ ಘಟನೆ ವಿಜಯನಗರದಲ್ಲಿ ನಡೆದಿದೆ.

ಇಲ್ಲಿನ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್‌ ಖಾನ್ ಅವರು, ದೇಶದ 2ನೇ ಬೃಹತ್ ಧ್ವಜಸ್ತಂಭ ಎಂಬ ಹಗ್ಗಳಿಕೆಗೆ ಪಾತ್ರವಾಗಿದ್ದ ಧ್ವಜಸ್ತಂಭದಲ್ಲಿ ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದ್ದರು.

ಬಳಿಕ ಪಥಸಂಚಲನ ವೇಳೆ ಗೌರವ ವಂದನೆ ಸ್ವೀಕರಿಸುತ್ತಿದ್ದ ವೇಳೆ ಬೃಹತ್ ತ್ರಿವರ್ಣ ಧ್ವಜ ಕುಸಿದು ಬಿದ್ದಿದೆ.

ಈ ವೇಳೆ ಗರಂ ಆದ ಸಚಿವ ಝಮೀರ್ ಅಹ್ಮದ್‌ ಖಾನ್,  ಧ್ವಜ ಕುಸಿಯಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News