ವಿಜಯನಗರ | ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ

Update: 2025-03-16 11:28 IST
ವಿಜಯನಗರ | ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ
  • whatsapp icon

ವಿಜಯನಗರ : ಹೂವಿನಹಡಗಲಿಯ ಮಟನ್ ಮಾರ್ಕೆಟ್ ಬಳಿ ಬೆಳ್ಳಂಬೆಳಗ್ಗೆ ಸಲಾಂ ಸಾಹೇಬ್ ಅವರಿಗೆ ಸೇರಿರುವ ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಅಂಗಡಿ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಆಗಿರುವ ಬಗ್ಗೆ ವರದಿಯಾಗಿದೆ.

ಗುಜರಿ ಅಂಗಡಿಗೆ ಬೆಂಕಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದವರು ಸತತವಾಗಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. 50, ವರ್ಷದ ಹಳೆಯದಾಗಿರುವ ಈ ಗುಜರಿಯಲ್ಲಿ ರಬ್ಬರ್, ಪ್ಲಾಸ್ಟಿಕ್, ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿದೆ, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಹಾಗೂ ಟಯರ್‌ಗಳನ್ನು ಪುಡಿಮಾಡುವ ಕಾರ್ಖಾನೆಗೂ ಬೆಂಕಿ ತಗಲಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಘಟನೆಯಾದ ಸ್ಥಳಕ್ಕೆ ಹಡಗಲಿ CPI ದೀಪಕ್ ಭೂಸರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News