ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ : ಸೈಯದ್‌ ಮುಹಮ್ಮದ್ ತನ್ವೀರ್‌ ಹಾಶ್ಮಿ

Update: 2025-04-24 14:02 IST
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ : ಸೈಯದ್‌ ಮುಹಮ್ಮದ್ ತನ್ವೀರ್‌ ಹಾಶ್ಮಿ

ಸೈಯದ್‌ ಮುಹಮ್ಮದ್ ತನ್ವೀರ್‌ ಹಾಶ್ಮಿ 

  • whatsapp icon

ವಿಜಯಪುರ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆದಿದ್ದು, ಇದರಲ್ಲಿ 28 ಅಮಾಯಕ ಪ್ರವಾಸಿಗರು ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆ ಅತ್ಯಂತ ಕ್ರೂರ ಮತ್ತು ದುಃಖಕರ ಎಂದು ಹಝ್ರತ್‌ ಹಾಶಿಂಪೀರ್‌ ದರ್ಗಾದ ಧರ್ಮಾಧಿಕಾರಿ ಸೈಯದ್‌ ಮುಹಮ್ಮದ್ ತನ್ವೀರ್‌ ಹಾಶ್ಮಿ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಕಟನೆ ನೀಡಿರುವ ಅವರು, ಭಾರತೀಯ ಮುಸ್ಲಿಮರು, ಈ ಅಮಾನವೀಯ ಮತ್ತು ಅನಾಗರಿಕ ಭಯೋತ್ಪಾದನಾ ಕೃತ್ಯವನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಮೃತರ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುತ್ತೇವೆ. ಮತ್ತು ಅವರ ಜೊತೆಯಲ್ಲಿ ಇದ್ದೇವೆ. ಭಾರತ ಸರಕಾರವು ಈ ದುರಂತ ಘಟನೆಯ ತನಿಖೆ ನಡೆಸಬೇಕು. ಭಯೋತ್ಪಾದಕರನ್ನು ತಕ್ಷಣ ಹುಡುಕಿ, ಭಯೋತ್ಪಾದಕರಿಗೆ ಪಾಠವಾಗುವಂತೆ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಭಯೋತ್ಪಾದನೆಗೆ ಯಾವುದೇ ಧರ್ಮ ಅಥವಾ ಪಂಥವಿಲ್ಲ. ಯಾವುದೇ ಭಯೋತ್ಪಾದನಾ ಘಟನೆಯನ್ನು ಧರ್ಮಕ್ಕೆ ತಳುಕು ಹಾಕಬಾರದು. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರ ದೃಷ್ಟಿಯಿಂದ ನೋಡಬಾರದು. ಇಂತಹ ನಿರ್ಣಾಯಕ ಮತ್ತು ಕಷ್ಟದ ಸಮಯದಲ್ಲಿ ನಾವು ಭಾರತೀಯರು ಏಕತೆಯನ್ನು ಪ್ರದರ್ಶಿಸಬೇಕು.

ಈ ಕ್ರೂರ ಘಟನೆಯ ಕುರಿತು ಯಾವುದೇ ರಾಜಕೀಯ ಮಾಡಬಾರದು. ಸಮಸ್ತ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ಒಂದಾಗಿ ಭಾರತ ಸರಕಾರದ ಜೊತೆಯಲ್ಲಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕು. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಬೇಕು. ಭಾರತದ ಮುಸ್ಲಿಮರು ಸದಾ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಭಾರತ ಸರಕಾರದ ಜೊತೆಗೆ ನಿಲ್ಲುತ್ತಾರೆ ಮತ್ತು ಪ್ರೀತಿಯ ತಾಯ್ನಾಡಿನ ಸಮಗ್ರತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News