ವಿಜಯಪುರ | ಸರಣಿ ಅಪಘಾತ; ಬಿಎಸ್‌ಎಫ್ ಯೋಧ, ಆಂಬ್ಯುಲೆನ್ಸ್ ಚಾಲಕ ಮೃತ್ಯು
Update: 2025-04-09 16:10 IST

ಮೃತ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ್
ವಿಜಯಪುರ : ಸರಣಿ ರಸ್ತೆ ಅಪಘಾತದಲ್ಲಿ ಬಿಎಸ್‌ಎಫ್ ಯೋಧ ಮತ್ತು ಆಂಬ್ಯುಲೆನ್ಸ್ ಚಾಲಕ ಮೃತಪಟ್ಟ ಘಟನೆ ನಿಡಗುಂದಿ ಪಟ್ಟಣದ ಬಳಿ ಬುಧವಾರ ನಡೆದಿದೆ.
ಮೃತರನ್ನು ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಬಿಎಸ್‌ಎಫ್ ಯೋಧ ಮೌನೇಶ ರಾಠೋಡ್ , ಕೇರಳ ಮೂಲದ ಆಂಬ್ಯುಲೆನ್ಸ್ ಚಾಲಕ ರಿತೇಶ್ ಎಂದು ಗುರುತಿಸಲಾಗಿದೆ.
ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯೋಧ ಮೌನೇಶ ಮೃತಪಟ್ಟಿದ್ದಾರೆ. ನಂತರ ಮುಂದೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಗೂ ಹಿಂಬದಿಯಿಂದ ಲಾರಿ ಢಿಕ್ಕಿ ಹೊಡೆದಿದ್ದು, ಆಂಬ್ಯುಲೆನ್ಸ್ ಚಾಲಕ ರಿತೇಶ್ ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.