ಯಾದಗಿರಿ: ಅಸ್ಲಂ ಫರ್ಶೂರಿ ಅವರ ನಿಧನಕ್ಕೆ ಡಾ.ರಫೀಕ್ ಸೌದಾಗರ ಸಂತಾಪ
Update: 2025-01-09 18:00 GMT
ಯಾದಗಿರಿ: ಖ್ಯಾತ ಉರ್ದು ಕವಿ ಅಸ್ಲಾಂ ಫರ್ಶುರಿ ಹೈದರಾಬಾದ್ ಅವರ ನಿಧನಕ್ಕೆ ಅಖಿಲ ಭಾರತೀಯ ಉರ್ದು ಅಭಿವೃದ್ಧಿ ಸಂಘ ಜಿಲ್ಲಾ ಅಧ್ಯಕ್ಷ ಡಾ.ರಫೀಕ್ ಸೌದಾಗರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸ್ಲಾಂ ಫರ್ಶೂರಿ ಅವರು ಪ್ರಮುಖ ಪ್ರಸಾರಕ, ಕವಿ, ಬರಹಗಾರ ಮತ್ತು ವಿಶ್ವವಿಖ್ಯಾತ ನಿರುಪಕರು ಮತ್ತು ಉದ್ಘೋಷಕರಾಗಿದ್ದರು ಎಂದು ಅವರು ಹೇಳಿದರು.
ಅವರು ಭಾರತ ಮತ್ತು ವಿದೇಶಗಳಲ್ಲಿ ಮುಶೈರಾಗಳನ್ನು ಆಯೋಜಿಸುವ ಕರ್ತವ್ಯಗಳನ್ನು ನಿರ್ವಹಿಸಿದರು. ಯಾದಗಿರಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಮುಷಾಯಿರಾ ಕೂಡ ಅಸ್ಲಂ ಫರ್ಶೂರಿ ಅವರು ನಿರೂಪಿಸಿದ್ದರು ಎಂದು ಡಾ.ರಫೀಕ್ ಸೌದಾಗರ ಹೇಳಿದರು