ಯಾದಗಿರಿ: ಬಸ್ ದರ ಹೆಚ್ಚಳ ಹಿಂಪಡೆಯಲು ಎಬಿವಿಪಿ ಒತ್ತಾಯ

Update: 2025-01-09 16:16 GMT

ಯಾದಗಿರಿ/ ಸುರಪುರ: ಬಸ್ ಪ್ರಯಾಣ ದರ ಹೆಚ್ಚಳಗೊಳಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಒದಗಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಘಟಕದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಪರಿಷತ್‌ನ ಪ್ರಮುಖರು ಮಾತನಾಡಿ ಇತ್ತೀಚೆಗೆ ಸರಕಾರ ರಾಜ್ಯದ ಸರಕಾರಿ ಬಸ್ ಸಂಚಾರ ದರವನ್ನು ಶೇ15 ರಷ್ಟು ಹೆಚ್ಚಳಗೊಳಿಸಿರುವ ನಿರ್ಧಾರ ಸರಿಯಲ್ಲ ಇದರಿಂದ ರಾಜ್ಯದ ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಬರೆ ಎಳೆದಂತಾಗಿದ್ದು ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಸರಿಯಿಲ್ಲದ ಕಾರಣ ಪ್ರಯಾಣಿಕರಿಗೆ ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಮರಕಲ್ ಗ್ರಾಮಕ್ಕೆ ಬಸ್ ಸಂಚಾರ ಕಲ್ಪಿಸಬೇಕು ಸುರಪುರ ದಿಂದ ಕೆಂಭಾವಿಗೆ ಹೋಗುವ ಬಸ್‌ನ್ನು ಕರಡಕಲ್ ಗ್ರಾಮದ ಒಳಗೆ ಹೋಗುವಂತಾಗಬೇಕು, ಸುರಪುರ ದಿಂದ ಹುಣಸಗಿ ಮಾರ್ಗದಲ್ಲಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಳಗೊಳಿಸಬೇಕು ಹಾಗೂ ಲಿಂಗಸೂಗುರು ಮಾರ್ಗವಾಗಿ ಸುರಪುರಕ್ಕೆ ಬರುವ ಪ್ರತಿಯೊಂದು ಬಸ್ ದೇವಾಪುರ ಕ್ರಾಸ್ ಹಾಗೂ ಗ್ರಾಮದಲ್ಲಿ ನಿಲುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ ಎಸ್.ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಲಾಯಿತು ನಗರ ಕಾರ್ಯದರ್ಶಿ ದೇವರಾಜ ನಾಯಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News