ಯಾದಗಿರಿ | ರಸ್ತೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ
Update: 2025-01-08 17:02 GMT
ಯಾದಗಿರಿ : ಇಲ್ಲಿನ ಸಮೀಪದ ನಾಗಲಾಪುರ ಸೀಮಾಂತರದ ಯಾದಗಿರಿ-ರಾಯಚೂರು ರಾಷ್ಟ್ರೀಯ ಹೆದ್ದಾರಿ 150ರ ಮೇಲೆ 25ರಿಂದ 30 ವಯಸ್ಸಿನ ಅಪರಿಚಿತ ಮಹಿಳೆಯ ಮೃತದೇಹ ಬುಧವಾರ ಪತ್ತೆಯಾಗಿದೆ.
ಜ.7ರ ರಾತ್ರಿ 10 ಗಂಟೆಯಿಂದ ಜ.8 ಬೆಳಿಗ್ಗೆ 7:30ಗಂಟೆಯ ಮಧ್ಯದ ಅವಧಿಯಲ್ಲಿ ಅಪರಿಚಿತ ಮಹಿಳೆ ಹೆದ್ದಾರಿ ಮೇಲೆ ನಡೆದುಕೊಂಡು ಹೋಗುವಾಗ ರಸ್ತೆಯಲ್ಲಿ ಹೋಗಿ ಬರುವ ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ನಾಗಲಾಪುರ ಸೀಮಾಂತರದ ಸಾಬಣ್ಣ ಮರಗಪ್ಪ ತಿಮ್ಮಣ್ಣೂರ್ ಹೊಸಳ್ಳಿ (ಆರ್) ಜಮೀನಿನ ಪಕ್ಕದ ಹೆದ್ದಾರಿ ಮೇಲೆ ಪತ್ತೆಯಾದ ಮೃತದೇಹದ ಮೇಲೆ ಬೇರೆ ವಾಹನಗಳು ಹೋಗಿದ್ದರಿಂದ ಮೃತದೇಹ ಪೂರ್ತಿ ನುಜ್ಜುಗುಜ್ಜಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ ಎಂದು ಪಿಐ ವಿನಾಯಕ ಅವರು ತಿಳಿಸಿದ್ದಾರೆ.