ಯಾದಗಿರಿ | ಸ್ವಯಂ ಉದ್ಯಮಗಳ ಸ್ಥಾಪನೆ ಮಾಡಿ ಆರ್ಥಿಕವಾಗಿ ಸಬಲರಾಗಿ : ಡಿ.ಸಿ ಡಾ.ಸುಶೀಲಾ ಬಿ. ಕರೆ
ಯಾದಗಿರಿ : ಆರ್ಥಿಕ ಅಭಿವೃದ್ಧಿ ಹೊಂದಲು ಬೇಡಿಕೆ ಇರುವ ಸಣ್ಣ ಸಣ್ಣ ಉದ್ಯಮಗಳನ್ನು ಸ್ಥಾಪಿಸಿ ಆರ್ಥಿಕವಾಗಿ ಸಬಲರಾಗಿ, ಮುಖ್ಯವಾಹಿನಿಗೆ ಬರಬೇಕು ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ (ಕೆ.ಕೆ.ಆರ್.ಡಿ.ಬಿ.), ಕಲಬುರಗಿ ಕೌಶಲ್ಯಾಭಿವೃದ್ಧಿ, ಉದ್ಯಮಶಿಲತೆ ಹಾಗೂ ಜೀವನೋಪಾಯ ಇಲಾಖೆ, ಹಾಗೂ ಯಾದಗಿರಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಂಯುಕ್ತಾಶ್ರಯದಲ್ಲಿ ಕೆ.ಕೆ.ಆರ್.ಡಿ.ಬಿ. ಉದ್ಯೋಗ ಆವಿಷ್ಕಾರ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ವರ್ಕಿಂಗ್, ಮೊಬೈಲ್ ಫೋನ್ಸ್ ರಿಪೇರ್ಸ್ ಮತ್ತು ಸರ್ವೀಸಿಂಗ್ ಹಾಗೂ ಬ್ಯೂಟಿ ಪಾರ್ಲ್ರ್ ಮ್ಯಾನೇಜಮೆಂಟ್ ಬಗ್ಗೆ 30 ದಿನಗಳ ನಿರ್ದಿಷ್ಟ ವಲಯಾಧಾರಿತ ಉದ್ಯಮಶೀಲತಾಬಿವೃದ್ಧಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಕ್ರೀಯಾಶೀಲತೆಯಿಂದ ಯಾವುದೇ ಕಾರ್ಯವನ್ನು ಮಾಡಿದರೆ ಅದರಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಕೌಶಲ್ಯಾಧಾರಿತ ಸೇವಾ ವಲಯಗಳ ಉದ್ಯಮಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಕಂಪ್ಯೂಟರ್ ಹಾರ್ಡವೇರ್, ನೆಟ್ವರ್ಕಿಂಗ್, ಮೋಬೈಲ್ ಫೋನ್ಸ್ ರಿಪೇರ್ಸ್ ಮತ್ತು ಸರ್ವೀಸಿಂಗ್ ಹಾಗೂ ಬ್ಯೂಟಿ ಪಾರ್ಲರ್ ಮ್ಯಾನೇಜಮೆಂಟ್ ಉದ್ಯಮಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಈ ತರಬೇತಿಗಳು ಸೂಕ್ತವಾದ ತರಬೇತಿ ಪಡೆದ ತರಬೇತಿಯ ಜ್ಞಾನವನ್ನು ಸದುಪಯೋಗಪಡಿಸಿಕೊಂಡು ಉದ್ಯಮವನ್ನು ಪ್ರಾರಂಭಿಸಿ ಆರ್ಥಿಕವಾಗಿ ಮುಂದುವರೆಯಬೇಕು ಎಂದು ತಿಳಿಸಿ, ಸಿಡಾಕ್ ಮುಖಾಂತರ ಹಮ್ಮಿಕೊಂಡಿರುವ ಈ ತರಬೇತಿಗಳು ಉತ್ತಮ ಆಯ್ಕೆಯಾಗಿವೆ ಮತ್ತು ತರಬೇತಿಯು ವ್ಯವಸ್ಥಿತವಾಗಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ ತರಬೇತಿಗಳು ಉತ್ತಮವಾಗಿ ನಡೆಸಿದ್ದಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಎಸ್.ಚನ್ನಬಸಪ್ಪ, ಯಾದಗಿರಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಅಣಬಿ, ಯಾದಗಿರಿ ಕೌಶಲ್ಯಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಬಸಪ್ಪ, ಯಾದಗಿರಿ ಸಿಡಾಕ್ ಜಂಟಿ ನಿರ್ದೇಶಕರು, ತರಬೇತುದಾರರಾದ ರವಿರಾಜ, ಮಾಲತಿ, ಸಮಾರಂಭದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರಾರ್ಥಿಸಿದರು, ಕಲಬುರಗಿ ಸಿಡಾಕ್ ಸೈಯದ್ ಆಷ್ಫಕ್ ಅಹ್ಮದ್ ಫ್ಯಾಕಲ್ಟಿ ಸ್ವಾಗತಿಸಿ ಹಾಗೂ ಕಾರ್ಯಕ್ರಮ ನಿರೂಪಿಸಿದರು ಯಾದಗಿರಿ ಸಿಡಾಕ್ ತರಬೇತಿದಾರರು ಉಷಾ ವಂದನಾರ್ಪನೆ ವಂದಿಸಿದರು.