ಯಾದಗಿರಿ | ಬಹಿಷ್ಕಾರ ಎನ್ನುವ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿದೆ : ಆದಪ್ಪ ಹೊಸ್ಮನಿ
ಯಾದಗಿರಿ : ಸಮಾಜದಲ್ಲಿ ಮನುಷ್ಯರನ್ನು, ಮನುಷ್ಯರು ಬಹಿಷ್ಕಾರ ಹಾಕುವಂತ ಅನಿಷ್ಠ ಪದ್ಧತಿ ಇಂದಿಗೂ ಜೀವಂತವಾಗಿರುವುದು ಖೇದದ ಸಂಗತಿಯಾಗಿದೆ ಎಂದು ವಕೀಲ ಆದಪ್ಪ ಹೊಸ್ಮನಿ ಹೇಳಿದ್ದಾರೆ.
ಸುರಪುರ ನಗರದ ತಹಶಿಲ್ದಾರ್ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೋ.ಬಿ.ಕೃಷ್ಣಪ್ಪ ಬಣ ದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವರಳವಾಡಿ ಹೊಸೂರ ಗ್ರಾಮದಲ್ಲಿ ದಲಿತ ಸಮುದಾಯದ ಎರಡು ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ, ಅಲ್ಲದೆ ಚಾಮರಾಜನಗರ ಜಿಲ್ಲೆಯ ಹಗರ ಗ್ರಾಮದಲ್ಲಿ ಸವರ್ಣೀಯರು ದಲಿತ ಸಮುದಾಯದವರಿಗೆ ಮನೆ ಬಾಡಿಗೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಸವರ್ಣಿಯರೆ ಸವರ್ಣಿಯರನ್ನು ಬಹಿಷ್ಕಾರ ಹಾಕಿರುವ ಅಮನಾವೀಯ ಘಟನೆಯನ್ನು ಖಂಡಿಸುವುದಾಗಿ ತಿಳಿಸಿದರು.
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಜ.1 ರಂದು ಅಂಬೇಡ್ಕರ್ ಮೂರ್ತಿಗೆ ಅವಮಾನಿಸಲಾಗಿದ್ದು, ಕಿಡಿಗೇಡಿಗಳಿಗೆ ಕಠಿಣ ಶೀಕ್ಷೆ ನೀಡಬೇಕು ಎಂದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ದೊರೆ ಬೊಮ್ಮನಹಳ್ಳಿ, ಸಂಘದ ತಾಲೂಕು ಸಂಚಾಲಕ ಮಲ್ಲು ಕಟ್ಟಿಮನಿ ಮುಷ್ಠಳ್ಳಿ, ಜಿಲ್ಲಾ ಸಂ.ಸಂಚಾಲಕರಾದ ಹಣಮಂತ ಹೊಸ್ಮನಿ, ರಾಜು ದೊಡ್ಮನಿ, ತಾ.ಸಂ.ಸಂಚಾಲಕರಾದ ವೈಜನಾಥ ಹೊಸ್ಮನಿ, ಮಾನಪ್ಪ ಬಳಬಟ್ಟಿ, ಮಲ್ಲು ಕೆಸಿಪಿ, ರಮೇಶ ಅರಕೇರಿ, ಮಾನಪ್ಪ ಕಿರದಳ್ಳಿ, ತಿರುಪತಿ ದೊರೆ ಬದ್ಯಾಪುರ, ಈರಣ್ಣ ದೊರೆ ಕಿರದಳ್ಳಿ, ಆಮಲಿಂಗಪ್ಪ ಮೂಕನವರ, ಮೌನೇಶ ದೊಡ್ಮನಿ, ವಿಕ್ರಮ ಕರಡಕಲ್, ಶಿವಣ್ಣ ನಾಟೆಕಾರ್, ಗಿರೀಶ ಶಾಖನವರ್, ಹಣಮಂತ, ಮೌನೇಶ, ಅಮಿತ್ ಗುರಿಕಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.