ಯಾದಗಿರಿ | ಕ್ರೀಡೆಗಳಿಗೆ ಸಮಯ ಮೀಸಲಿಡಿ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್

Update: 2025-01-07 12:55 GMT

ಯಾದಗಿರಿ : ಇಂದಿನ ಒತ್ತಡ ಜೀವನದಲ್ಲಿ ಮನುಷ್ಯ ಮಾನಸಿಕ ಖಿನ್ನತೆಗೆ ಹೆಚ್ಚು ಒಳಗಾಗುತ್ತಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಆರ್ಟಿ.ಓ ಬ್ಯಾಡ್ಮಿಂಟನ್ ಗ್ರೂಪ್ ಮತ್ತು ಎನ್ ಸಿಪಿ ಸ್ಪೋರ್ಟ್ಸ್ ಅಕಾಡೆಮಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ನಲ್ಲಿ ಗೆಲುವು ಸಾಧಿಸಿದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ದಿನದ ಒಂದೆರಡು ಗಂಟೆಗಳಷ್ಟು ನಾವು ಕ್ರೀಡೆಗಳಿಗೆ ಸಮಯ ಮೀಸಲಿಡುವುದು ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ ಎಂದರು.

ವಿ.ಬಿಆರ್ ಮುದ್ನಾಳ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಕೊಡಮಾಡುವ 11,100 ರೂ.ಮೊತ್ತದ ಮೊದಲ ಬಹುಮಾನ ಹಾಗೂ ಟ್ರೋಫಿಯನ್ನು ಕ್ರೀಡಾಳುಗಳಾದ ಸಾಯಬಣ್ಣ ಮತ್ತು ಮಿಥಿಲ್ ಕುಮಾರಗೆ ವಿತರಸಲಾಯಿತು.

ಕ್ರಮವಾಗಿ ಬಸವರಾಜ ಗುಂದನೂರ ನೀಡಿದ 5,100 ರೂ. ಎರಡನೇ ಬಹುಮಾನವನ್ನು ಸಂತೋಷ, ವೆಂಕಟೇಶ ಮತ್ತು ಮಲ್ಲಿಕಾರ್ಜುನ ಕಟಿಕಟಿ ಹೆಡಗಿಮದ್ರಾ ಅವರ ಮೂರನೇ ಬಹುಮಾನವನ್ನು ಸತೀಶ ಶಹಾಪೂರಕರ ಮತ್ತು ಗೌತಮಗೆ ನೀಡಲಾಯಿತು.

ಅಲ್ಲದೆ ತಂಡದ ಎಲ್ಲ ಸದಸ್ಯರಿಗೆ ಅಕಾಡೆಮಿಯಿಂದ ಟ್ರೋಫಿ ಮತ್ತು ಮೇಡಲ್ಗಳನ್ನು ನೀಡಿ ಗೌರವಿಸಲಾಯಿತು.

ಪ್ರಸಾದ ಯಾರಲಗಡ್ಡ, ಶಿವರಾಜ ಸಾಹುಕಾರ, ಅರುಣಕುಮಾರ ದಾಸನಕೇರಿ, ನಾಗು ಲದ್ದಿ ಸಾಯಬಣ್ಣ, ಮಿಥಿಲ್, ಪವನಕುಮಾರ, ಉಮೇಶ, ವಿಶ್ವನಾಥ ಶೆಟ್ಟಿ ಸಾಹುಕಾರ, ಅಮೃತ, ಪ್ರಕಾಶ ಮಹ್ಮದ ಗಪೂರ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News