ಯಾದಗಿರಿ | ಭೀಮವಾದ ದಲಿತ ಸಂಘರ್ಷ ಸಮಿತಿ ವಡಗೇರಾ ತಾಲ್ಲೂಕು ಸಂಚಾಲಕರಾಗಿ ಪರಶುರಾಮ ಮದರಕಲ್ ಆಯ್ಕೆ

Update: 2025-01-07 11:41 GMT

ಯಾದಗಿರಿ : ಹಳ್ಳಿ ಹಳ್ಳಿಗಳಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘಟನೆ ಬಲಿಷ್ಠವಾಗಿ ಕಟ್ಟಬೇಕು ಎಂದು ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಬಿ.ಎನ್.ವೆಂಕಟೇಶ ಕರೆ ನೀಡಿದರು.

ಈ ಸಂದರ್ಭದಲ್ಲಿ ಭೀಮವಾದ ದಲಿತ ಸಂಘರ್ಷ ಸಮಿತಿ ವಡಗೇರಾ ತಾಲೂಕ ಸಮಿತಿ ರಚನೆ ಮಾಡಿ ವಡಗೇರಾ ತಾಲೂಕು ಸಂಚಾಲಕರಾಗಿ ಪರಶುರಾಮ ಮದರಕಲ್ ಆದೇಶ ನೀಡಿದ್ದಾರೆ.

ಈ ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಸಂಚಾಲಕ, ಶಿವಶಂಕರ್ ಎಚ್.ಹೊಸಮನಿ ಮಲ್ಲಪ್ಪ ಲಂಡನ್ ಕರ್ ಪರಶುರಾಮ ಹಯಳಕರ್, ಹಣಮಂತರಾಯ ಬಿಜಾನವುರು, ಸಿದ್ರಾಮಪ್ಪ ನಾಯ್ಕಲ್, ಹಣಮಂತ ತೇಲ್ಕರ್, ಪರಶು ಕನ್ನಳ್ಳಿ, ವಹಿಸಿದರು.

ಸಂಘಟನೆಯ ಸಂಚಾಲಕರಾಗಿ ಗಿರಿಮಲ್ಲಪ್ಪ ಮುನಮುಟಗಿ, ತಾಲೂಕು ಖಜಾಂಚಿಯಾಗಿ ಶರಣು ಬಸವಂತಪೂರ, ಸಂ. ಸಂಚಾಲಕರಾಗಿ ನಾಬಾ ಕ್ಯಾತನಾಳ, ಮಲ್ಲಣ್ಣ ಮಾಗನೂರು ಪರುಸುರಾಮ ಬಸವಂತಪೂರ, ಬಸಲಿಂಗಪ್ಪ ಹೈಯ್ಯಾಳ (ಬಿ), ತಿರುಪತಿ ಮುನಮುಟಗಿ, ರಮೆಶ ಮುನಮುಟಿಗಿ, ದೇವಪ್ಪ ಮದರಕಲ್, ಇವರನ್ನು ಆಯ್ಕೆ ಮಾಡುಲಾಯಿತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News