ಯಾದಗಿರಿ | ನಾ ಡಿಸೋಜ ಅಗಲಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ : ಸಿದ್ದಪ್ಪ ಎಸ್.ಹೊಟ್ಟಿ

Update: 2025-01-07 14:07 GMT

ಯಾದಗಿರಿ : ನಾ ಡಿಸೋಜ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಹಾಗೂ 2014ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ಅಗಲಿಕೆಗೆ ಈ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾದ ನಷ್ಟ ಆಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಎಸ್.ಹೊಟ್ಟಿ ಹೇಳಿದರು.

ನಗರದ ಹಿಂದಿ ಪ್ರಚಾರ ಸಭಾಂಗಣದಲ್ಲಿ ಆಯೋಜಿಸಿದ ʼಡಾ.ನಾ ಡಿಸೋಜ ಅವರ ನುಡಿ ನಮನʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕಕ್ಕೆ ಕಾದಂಬರಿ, ಸಣ್ಣ ಕಥೆ, ನಾಟಕ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ 98 ಕೃತಿಗಳನ್ನು ಕೊಡಗೆಯಾಗಿ ನೀಡುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. ಅವರಲ್ಲಿ ಇರುವ ಪರಿಸರ ಪ್ರಜ್ಞೆ ಹಾಗೂ ಕಾಳಜಿಯನ್ನು ಅವರ ಸಾಹಿತ್ಯ ಒಲವಿನಲ್ಲಿ ಕಾಣುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಸವರಾಜ ಅರಳಿ ಮೋಟ್ನಳ್ಳಿ, ಯಾದಗಿರಿ ತಾಲೂಕು ಕಸಾಪ ಅಧ್ಯಕ್ಷ ವೆಂಕಟೇಶ ಕಲಕಂಭ, ಮಹೇಶ ಪಾಟೀಲ ಕಿಲ್ಲನಕೇರ, ದೇವರಾಜಗೌಡ ಬೆಳಿಗೇರಾ ಅವರ ಸಂತಾಪ ನುಡಿ ಮಾತನಾಡಿದರು.

ಈ ಸಂಧರ್ಭದಲ್ಲಿ ಆರ್.ಮಾಹದೇವಪ್ಪಗೌಡ ಅಬ್ಬೆತುಮಕೂರ, ಸಿ ಎಮ್ ಪಟ್ಟೇದರ್, ವೀರಭದ್ರಯ್ಯ ಸ್ವಾಮಿ ಜಾಕಾಮಠ, ಚಂದ್ರಶೇಖರ ಅರಳಿ, ನಾಗಪ್ಪ ಸಜ್ಜನ, ಲಕ್ಷ್ಮೀನಾರಯಣ ಗುಂಡಾನೂರ, ಸೂರ್ಯಕಾಂತ ಕರದಳ್ಳಿ, ಸುಭಾಷ್ ರೆಡ್ಡಿ ಬಿರನೂರ, ಬಸವಂತ್ರಾಯಗೌಡ ಮಾಲಿ ಪಾಟೀಲ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಲಕ್ಷ್ಮಣ್ಣ, ಚೆನ್ನಪ್ಪ ಸಾಹು ಠಾಣಗುಂದಿ, ಮಲ್ಲಿಕಾರ್ಜುನ ಹಳಕಟ್ಟಿ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News