ಯಾದಗಿರಿ | ಅನಾಥಾಶ್ರಮದ ಹೆಸರಲ್ಲಿ ಸರಕಾರದ ಅನುದಾನ ದುರ್ಬಳಕೆ : ಕರವೇ ಆರೋಪ
ಯಾದಗಿರಿ/ ಸುರಪುರ : ನಗರದ ದಾಸರಗಲ್ಲಿಯಲ್ಲಿರುವ ಅನಾಥಾಶ್ರಮದ ಹೆಸರಲ್ಲಿ ಸರಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಧ್ವನಿ ಸಂಘಟನೆಯ ಮುಖಂಡರು ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಅನಾಥಾಶ್ರಮದಲ್ಲಿ ಮಕ್ಕಳೆ ಇಲ್ಲವೆಂದು ಆರೋಪಿಸಿ ಸರಕಾರದ ಅನುದಾನ ದುರ್ಬಳಕೆಯಾಗಿರುವ ಕುರಿತು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನಂತರ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜೀವಪ್ಪ ದರಬಾರಿ,ಪಾಷಾ ಹವಲ್ದಾರ್,ಮಲ್ಲಿಕಾರ್ಜುನ ಪೂಜಾರಿ,ಭೀಮು ಸುರಪುರ,ಕಾಸಿಮಸಾಬ ದೊಡ್ಮನಿ,ಮಹ್ಮದ್ ಇಲ್ಯಾಸ್,ಮುಜಮಿಲ್,ರಫೀಕ್ ಸೇರಿದಂತೆ ಅನೇಕರಿದ್ದರು.
ಸರಕಾರ ದಿಂದ ಇದುವರೆಗೆ ನಯಾ ಪೈಸೆ ಅನುದಾನ ಬಂದಿಲ್ಲ, ಸಂಘಟನೆಯವರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ,ಅನಾಥಾಶ್ರಮದಲ್ಲಿನ ಮಕ್ಕಳನ್ನು ಮುರಾರ್ಜಿದೇಸಾಯಿ ಶಾಲೆಗೆ ಸೇರಿಸಲಾಗಿದ್ದು, ಅನಾಥಾಶ್ರಮದಲ್ಲಿ ಯಾವುದೇ ಮಕ್ಕಳಿಲ್ಲ,ಮಕ್ಕಳಿದ್ದಾರೆ ಎಂದು ನಾವು ಎಲ್ಲಿಯೂ ಹೇಳಿಲ್ಲ.
- ಮದನ ಕಟ್ಟಿಮನಿ ಅನಾಥಾಶ್ರಮದ ವ್ಯವಸ್ಥಾಪಕ