ಯಾದಗಿರಿ: ನಕಲಿ ಬಿಲ್ ಸೃಷ್ಟಿಸಿದ ಆರೋಪ; ಎಇಇ ವಿರುದ್ಧ ಪ್ರಕರಣ ದಾಖಲು
Update: 2024-11-22 06:07 GMT
ಯಾದಗಿರಿ: ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿಯಲ್ಲಿ ನಕಲಿ ಬಿಲ್ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಸುರಪುರ ಎಇಇ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರಪುರ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಹಣಮಂತರಾಯ ಪಾಟೀಲ್ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾದಗಿರಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾದ ಆನಂದ ಇಮ್ಡೆ ಅವರು ದೂರು ನೀಡಿದ್ದಾರೆ.
ಕಾಮಗಾರಿಯ ಛಾಯಾಚಿತ್ರಗಳು ಕಂಪ್ಯೂಟರ್ ಮಿಕ್ಸಿಂಗ್ ಪೋಟೋ ಸೃಷ್ಠಿಸಿ, ಸರಕಾರದ ಅನುದಾನ ದುರುಪಯೋಗ ಮಾಡಲು ಯತ್ನಿಸಿದ್ದು, ನಕಲಿ ದಾಖಲೆಗಳನ್ನು ತಯಾರಿಸಿರುವುದು ಕಂಡು ಬಂದಿದೆ. ಇವರ ಈ ಕೃತ್ಯದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.