ಯಾದಗಿರಿ | ಯೇಸುಕ್ರಿಸ್ತರ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು: ರೆ.ಎಸ್.ಸತ್ಯಮಿತ್ರ
ಯಾದಗಿರಿ : ಯೇಸುಕ್ರಿಸ್ತರ ಸಂದೇಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಆ ಮೂಲಕ ಜಗತ್ತಿನಲ್ಲಿ ಶಾಂತಿ ಹಾಗೂ ಸಮೃದ್ಧಿ ನೆಲೆಸಲು ಮುಂದಾಗೋಣ ಎಂದು ಕ್ರೈಸ್ತ ಸಮುದಾಯದ ಜಿಲ್ಲಾ ಮೇಲ್ವಿಚಾರಕ ರೆ.ಎಸ್.ಸತ್ಯಮಿತ್ರ ತಿಳಿಸಿದರು.
ಸುರಪುರ ನಗರದ ಮೆಥೋಡಿಸ್ಟ್ ಕೇಂದ್ರ ಚರ್ಚನಲ್ಲಿ ಕ್ರೈಸ್ತ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಸ್ಮಸ್ ಹಬ್ಬದಲ್ಲಿ ಭಾಗವಹಿಸಿ ದೈವ ಸಂದೇಶ ನೀಡಿ, ಯೇಸು ಕ್ರಿಸ್ತರ ಜನನದ ಪ್ರಸಂಗ ಕುರಿತು ತಿಳಿಸುತ್ತಾ ಶಾಂತಿದೂತ ಕರೆಯಲ್ಪಡುವ ಯೇಸುಕ್ತಿಸ್ತರು ಈ ಭೂಮಿಯ ಮೇಲೆ ಅವತರಿಸಿ ಜಗತ್ತಿನಲ್ಲಿ ಶಾಂತಿ ಹಾಗೂ ಸಮಾಧಾನದ ಬಗ್ಗೆ ಇಡೀ ಜಗತ್ತಿಗೆ ತಿಳಿಸಿದ್ದಾರೆ ಎಂದು ಹೇಳಿದರು.
ಕ್ರೈಸ್ತ ಸಮುದಾಯದ ದೊಡ್ಡ ಹಬ್ಬವಾಗಿರುವ ಕ್ರಿಸಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ನಂತರ ಕೇಕ್ ಕತ್ತರಿಸಿ ಎಲ್ಲರಿಗೂ ಸಿಹಿ ವಿತರಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು ಸಭಾಪಾಲಕ ರೆ.ಪ್ರಕಾಶ ಹಂಚಿನಾಳ. ಚರ್ಚ್ನ ಪ್ರಮುಖರಾದ ಸಾಮ್ಯುವೇಲ್ ಮ್ಯಾಥ್ಯೂ, ವಸಂತಕುಮಾರ, ಜಯಪ್ಪ, ಸಿಮಿಯೋನ್, ರಮೇಶ ಪಾಲ್,ಸುಜಯಕುಮಾರ, ಥಾಮಸ್ ಮ್ಯಾಥ್ಯೂ, ಜೇವೇರ್, ಡೇವಿಡ್, ಜಸ್ಟೀನ್, ಜಿಮ್ಮಿ, ನವೀನಕುಮಾರ, ಎಲಿಯಾ, ಪಿನಿಹಾಸ, ಮನೋರಮಾ ಸತ್ಯಮಿತ್ರ,ಸುಜಾತಾ, ಸುಕುಮಾರಿ, ಸೋನಾಸುಕುಮಾರಿ, ಸುನೀಲಾ ಶಾಂತಕುಮಾರ,ಚಂದ್ರಾ ಮ್ಯಾಥ್ಯೂ, ಸುಜಾತಾ ಜಯಪ್ಪ, ಸುಮತಿ ವಸಂತ, ಸಾಗರಿಕಾ, ಸುನೀತಾ, ಸೌಮ್ಯ, ಸರಿತಾ, ಶೋಭಾ, ರತ್ನಮ್ಮ, ನಯನಾ, ರೀನಾ ಇತರರು ಉಪಸ್ಥಿತರಿದ್ದರು.
ಹಬ್ಬದ ಪ್ರಯುಕ್ತ ಚರ್ಚ್ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು ಚರ್ಚ್ ನ ಆವರಣದಲ್ಲಿ ಯೇಸುಕ್ರಿಸ್ತರ ಜನನದ ಕುರುಹಾದ ಗೋದಲಿ ನಿರ್ಮಿಸಿ ಅಲಂಕರಿಸಲಾಗಿತ್ತು.