ಯಾದಗಿರಿ | ಸಂಭ್ರಮದ ಕ್ರಿಸ್ ಮಸ್ ಹಬ್ಬ ಆಚರಣೆ

Update: 2024-12-25 11:54 GMT

ಯಾದಗಿರಿ : ಜಗತ್ತಿಗೆ ಶಾಂತಿಯ ಮಾರ್ಗ ತೋರಿದ ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಭ್ರಮದಿಂದ ಆಚರಿಸಿದರು.

ಯಾದಗಿರಿಯ ಕೇಂದ್ರ ಮೆಥೋಡಿಸ್ಟ್ ಚರ್ಚ್ ನಲ್ಲಿ ಕ್ರಿಸ್ಮಸ್ ಅಂಗವಾಗಿ ಕ್ರೈಸ್ತರು ಕುಟುಂಬ ಸಮೇತವಾಗಿ ಚರ್ಚ್ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳ ಆಶೀರ್ವಚನ ಆಲಿಸಿದರು. ಯೇಸುವನ್ನು ಕೊಂಡಾಡುವ ದೇವಸ್ತುತಿ ಗೀತೆಗಳನ್ನು ಹಾಡಿ ಭಕ್ತಿ ಮೆರೆದರು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸ ಹಂಚಿಕೊಳ್ಳಲು ಕೇಕ್ ಕಟ್ ಮಾಡಿ ಹಬ್ಬ ಆಚರಿಸಲಾಯಿತು

ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತನ ಜನನ ಸಾರುವ ಬಾಲ ಕ್ರಿಸ್ತನ ಗೋದಲಿಯನ್ನು ಯುವಕರು ನಿರ್ಮಿಸಿದ್ದು, ಜನಾಕರ್ಷಣೆಯ ಕೇಂದ್ರವಾಗಿ ಬದಲಾಗಿತ್ತು. ಕೇಕ್ ಕತ್ತರಿಸಿ ಸಂಭ್ರಮಿಸಿದ ಕ್ರೈಸ್ತ ಸಮುದಾಯದವರು, ಪಟಾಕಿ ಸಿಡಿಸಿ ಕ್ರಿಸ್ತನ ಜನನವಾಗಿರುವುದನ್ನು ನಾಡಿಗೆ ಸಾರಿ ಹೇಳಿದರು.

ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕ್ರೈಸ್ತರ ಮನೆಗಳಲ್ಲಿ ಮತ್ತು ಚರ್ಚ್ ಗಳಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ರಾತ್ರಿ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆ, ದೇವಸ್ತುತಿ ಗಾಯನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಚರ್ಚ್ ಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News