ಯಾದಗಿರಿ | ಜಗದೀಶ ಮಾನುಗೆ ಜಾನಪದ ಗಾಯನ ರತ್ನ ಪ್ರಶಸ್ತಿ ಪ್ರದಾನ
ಯಾದಗಿರಿ : ಶ್ರೀ ಪುಟ್ಟರಾಜ ಪುಟಾಣಿಗಳ ಕಲಾ ತಂಡ ಶಹಾಪುರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಶಹಾಪುರದ ಬಾಪುಗೌಡ ನಗರದಲ್ಲಿನ ಶ್ರೀ ಬನ್ನಿ ಭ್ರಮರಾಂಬ ಮಲ್ಲಿಕಾರ್ಜುನ ಶಕ್ತಿ ಪೀಠ ದೇವಸ್ಥಾನದ ಆವರಣದಲ್ಲಿ ನಡೆದ ʼಜಾನಪದ ಸಂಗೋತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮʼದಲ್ಲಿ ನಗರದ ರಂಗಂಪೇಟೆಯ ಹಿರಿಯ ಸಂಗೀತ ಕಲಾವಿದ ಜಗದೀಶ ಮಾನು ಅವರಿಗೆ ಜಾನಪದ ಗಾಯನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುಲಿಂಗೇಶ್ವರ ಶಿವಾಚಾರ್ಯರು ಯಲಗೋಡ ಮೋರಟಗಿ, ಸೂಗೂರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹಿರೇಮಠ ಕುಂಬಾರ ಓಣಿ ಶಹಾಪುರ,ಗುರುಪಾದ ಮಹಾಸ್ವಾಮೀಜಿ ಫಕಿರೇಶ್ವರ ಮಠ ಶಹಾಪುರ, ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್, ಡಾ.ಶರಣು ಬಿ.ಗದ್ದುಗೆ ಕರವೇ ಉಕ ಅಧ್ಯಕ್ಷರು, ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ, ದತ್ತರಾಜ ಕಲಶೆಟ್ಟಿ, ಮಹಾದೇವಪ್ಪ ಸಾಲಿಮನಿ, ಕೆಂಚಪ್ಪ ನಗನೂರ, ಫೇವರಚಂದ್ ಜೈನ್, ರಾಯಪ್ಪಗೌಡ ಹುಡೇದ ಗೋಗಿ, ಚನ್ನಪ್ಪ ಆನೆಗುಂದಿ, ಸುರಪುರ ನಯೋಪ್ರಾ ಮಾಜಿ ಅಧ್ಯಕ್ಷ ಸೂಗುರೇಶ ವಾರದ್, ಶಿವುಕುಮಾರ ತಳವಾರ, ಆರ್.ಎಮ್.ಹೊನ್ನಾರಡ್ಡಿ, ಗುರು ಮಣಿಕಂಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.