ಯಾದಗಿರಿ | ಜನರ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡಿದ್ದೇನೆ : ಶಾಸಕ ಶರಣಗೌಡ ಕಂದಕೂರ
ಯಾದಗಿರಿ : ರಾಜಕೀಯದಲ್ಲಿ ವಿರೋಧ ಸಾಮಾನ್ಯ, ವಿಧಾನಸೌಧದಲ್ಲಿ ನಾನು ಮಾತನಾಡುತ್ತೇನೆ ಅಂದರೆ ಅದು ನಿಮ್ಮಾಶೀರ್ವಾದದಿಂದ ಮಾತ್ರ, ಜನರ ಧ್ವನಿಯಾಗಿ ನಾನು ವಿಧಾನಸೌಧದಲ್ಲಿ ಮಾತನಾಡಿದ್ದೇನೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಹೊನಗೇರಾ ಗ್ರಾಮದಲ್ಲಿ ಶಾಸಕ ಶರಣಗೌಡ ಕಂದಕೂರ ಅಭಿನಂದನಾ ಸಮಾರಂಭ ಹಾಗೂ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಸುಭಾಶ್ಚಂದ್ರ ಕಟಕಟಿಯವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಎಪಿಎಂಸಿ ಸೇರಿದಂತೆ ಮುಂದೆ ಹಲವು ಚುನಾವಣೆಗಳು ಬರಲಿವೆ, ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಾಗಿ ಆಗಬೇಕಿದೆ, ಪಕ್ಷ ಉಳಿದರೆ ನಾವು ನೀವು ಉಳಿಯೋದು ಸಾಧ್ಯ ಅದನ್ನರಿತು ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಮಠಕಲ್ ಮುಖಂಡರಾದ ಬಸಣ್ಣ ದೇವರಳ್ಳಿ, ದೊಡ್ಡನಾಗಪ್ಪ ಬೋವಿ, ಜಿ.ತಮ್ಮಣ್ಣ, ಮಲ್ಲಣಗೌಡ ಕೌಳೂರ, ಶರಣು ಆವಂಟಿ, ಭೋಜನಗೌಡ ಯಡ್ಡಳ್ಳಿ, ಪ್ರಕಾಶ ನಿರೆಟಿ, ಬಸಣ್ಣ ದಢವರಳ್ಳಿ, ಕೃಷ್ಣಾರಡ್ಡಿ, ಪಾಪಣ್ಣ ಮನ್ನೆ, ನಾಗರಾಜ ದೇಶಮುಖ, ಅಜಯರಡ್ಟಿ ಎಲ್ಹೇರಿ, ರವಿ ಪಾಟೀಲ, ರಾಮಣ್ಣ ಬಳಿಚಕ್ರ, ಸಣ್ಣಪ್ಪ ಕೋಟಗೇರಾ, ಗಿರಿನಾಥರಡ್ಡಿ, ನಾಗರಡ್ಡಿ ಮೋಟ್ನಳ್ಳಿ, ಮಾರ್ಥಂಡಪ್ಪ ಮಾನೇಗಾರ, ತಾಯಪ್ಪ ಬದ್ದೇಪಲ್ಲಿ, ಈಶ್ವರ ನಾಯಕ, ನರಾಪ್ಪ ಕವಡೆ, ಹಣಮಂತ ಬಂದಳ್ಳಿ, ತಿಪ್ಪಾರಡ್ಡಿ, ಶರಣಗೌಡ ಮೋಟ್ನಳ್ಳಿ, ಸೋಮನಗೌಡ ಬೆಳಗೇರಾ, ಗುರುನಾಥರಡ್ಡಿ ಸೈದಾಪೂರ, ಅಮೀನರಡ್ಡಿ, ಮಲ್ಲಣಗೌಡ ಹತ್ತಿಕುಣಿ ಇದ್ದರು.