ಯಾದಗಿರಿ | ರೈತರ ಜ್ವಲಂತ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಮಲ್ಲನಗೌಡ ಕರೆ

ಯಾದಗಿರಿ : ರಾಜ್ಯ ರೈತ ಸಂಘ ಹಸಿರು ಸೇನೆಯ ವಾಸುದೇವ ಮೇಟಿ ಬಣದ ಜಿಲ್ಲಾ ಉಪಾಧ್ಯಕ್ಷರ ಆಯ್ಕೆ ಹಾಗೂ ಶಹಾಪುರ ತಾಲೂಕಿನ ವನದುರ್ಗ ಗ್ರಾಮ ಘಟಕದ ಪದಾಧಿಕಾರಿಗಳ ನೇಮಕ ಮಾಡಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಿಗಿ ಮಾತನಾಡಿದರು.
ನಮ್ಮ ರೈತ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ರೈತರ ಜಲ್ವಂತ ಸಮಸ್ಯೆಗಳ ವಿರುದ್ಧ ಹಂತ ಹಂತವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಡೀಸೆಲ್, ವಿದ್ಯುತ್ ಹಾಗೂ ರೈತರ ಬಳಕೆಯ ವಸ್ತುಗಳು ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಿಸಿ ರೈತರನ್ನು ಸುಲಿಗೆ ಮಾಡುತ್ತಿವೆ. ಸರ್ಕಾರಗಳ ವಿರುದ್ಧ ಹೋರಾಟದ ಅವಶ್ಯಕತೆ ಇದೆ. ಸಂಘಟಿತ ಹೋರಾಟದಿಂದ ಮಾತ್ರ ಜಯ ಸಾಧ್ಯ ಎಂದರು.
ಶಹಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು.
ಜಿಲ್ಲಾ ಉಪಾಧ್ಯಕ್ಷರಾಗಿ (ರಾಜಾ ಮಾದಪ್ಪ ನಾಯಕ ) ವನದುರ್ಗ ಗ್ರಾಮ ಘಟಕ ಗೌರವಾಧ್ಯಕ್ಷರಾಗಿ (ಸಂತೋಷ ಪಾಟೀಲ್)ಅಧ್ಯಕ್ಷರಾಗಿ( ಅನಿಲ್ ಪತ್ತಾರ್) ಉಪಾಧ್ಯಕ್ಷರಾಗಿ (ಶರಣಯ್ಯ ಸ್ವಾಮಿ) (ಪ್ರದೀಪ್ ಸಜ್ಜನ್) ಪ್ರಧಾನ ಕಾರ್ಯದರ್ಶಿ (ಬಸವರಾಜ್ ಅಂಗಡಿ) ಖಜಾಂಚಿಯಾಗಿ (ಸುರೇಶ್) ಸಂಚಾಲಕ (ಇಸಾಕ್) ಕಾರ್ಯದರ್ಶಿ ( ಭರತ್) ಸಹಕಾರದರ್ಶಿ (ಬಸವರಾಜ್) ಕೆಂಭಾವಿ ಇವರುಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಘಟಕದ ಪದಾಧಿಕಾರಿಗಳು ಸದಸ್ಯರು ರೈತ ಮುಖಂಡರು ಉಪಸ್ಥಿತರಿದ್ದರು