ಯಾದಗಿರಿ | ಹೊಲಗಳಿಗೆ ನೀರು ಬಿಡಿಸಿದ ಶಾಸಕ ತುನ್ನೂರು ಅವರಿಗೆ ರೈತ ಸಂಘದಿಂದ ಸನ್ಮಾನ

ಯಾದಗಿರಿ : ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಹೊಲಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ಹರಿಸುವಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಅವರ ಪಾತ್ರ ಪ್ರಮುಖವಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್ ಹೇಳಿದರು.
ಸೋಮವಾರ ಶಾಸಕರ ಕಚೇರಿಯಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿದ ಲಕ್ಷ್ಮೀಕಾಂತ, ಜಿಲ್ಲೆಯ ರೈತರು ಪಡುತ್ತಿರುವ ಕಷ್ಟಕ್ಕೆ ಸ್ಪಂಧಿಸಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹತ್ತಿರ ಸುರಪುರ ಶಾಸಕರು, ರೈತ ಸಂಘದ ಪ್ರಮುಖರನ್ನು ಕರೆದುಕೊಂಡು ನೀರು ಬಿಡುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆಂದು ಹೇಳಿದರು.
ಕ್ಷೇತ್ರದ ರೈತರ, ಬಡವರ, ಕೂಲಿಕಾರ್ಮಿಕರ ಮತ್ತು ಜನಸಾಮಾನ್ಯರ ಬೇಡಿಕೆಗಳಿಗೆ ಸ್ಪಂಧಿಸುವ ಓರ್ವ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಹೇಳಿ ಮಾಡಿಸಿದ ಶಾಸಕರಾಗಿದ್ದಾರೆಂದು ಪಾಟೀಲ್ ಶ್ಲಾಘೀಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಮಹಾವೀರ ಲಿಂಗೇರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ್ ಕುಂಬಾರ್ ಮಲ್ಲಿಕಾರ್ಜುನ್ ಯಾದಗಿರಿ ಕಲ್ಯಾಣ ಕರ್ನಾಟಕ ಅಧ್ಯಕ್ಷರು ಹಾಗೂ ವಿಜಯಕುಮಾರ್ ವಾಟೆಕರ್ ಉತ್ತರ ಕರ್ನಾಟಕ ಅಧ್ಯಕ್ಷರು ರವಿ ಗುರುಮಿಟ್ಕಲ್ ತಾಲೂಕ ಅಧ್ಯಕ್ಷರು ಹಾಗೂ ರೈತ ಸಂಘದ ಮುಖಂಡರು ಉಪಸಿತರಿದ್ದರು.