ಯಾದಗಿರಿ | ಸುರಪುರ-ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿಗಳಿಂದ ʼಪರಿಸರ ಜಾಗೃತಿ ಜಾಥಾʼ : ಸ್ವಚ್ಛತಾ ಕಾರ್ಯಕ್ರಮ
Update: 2025-04-07 18:05 IST

ಸುರಪುರ: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ನಗರದ ಸಾಲುಮರದ ತಿಮ್ಮಕ್ಕ ವೃಕ್ಷೆ ಧ್ಯಾನ ( ಎಬಿಸಿಡಿ ಗಾರ್ಡ್ನ್) ವರೆಗೆ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು.
ನಂತರ ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಇಡೀ ಉದ್ಯಾನವವನ್ನು ಸ್ವಚ್ಛಗೊಳಿಸುವ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರದ ಮಹತ್ವದ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳ ಕುರಿತು ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ರಾಮನಗೌಡ ಪಾಟೀಲ್ ಹಾಗೂ ಕಾಲೇಜಿನ ಉಪನ್ಯಾಸಕರಾದ ಪ್ರಭಾಕರ್, ಅಯ್ಯನಗೌಡ ಪಾಟೀಲ್,ವನಕೆರೆಪ್ಪ ನಾಯ್ಕೋಡಿ, ಕೃಷ್ಣ, ವಿನೋದಕುಮಾರ್, ಕರಿಷ್ಮಾ, ಸಾನಿಯಾ ಮತ್ತು ಅರಣ್ಯಾಧಿಕಾರಿಗಳಾದ ಬಸವರಾಜ ನಾಯಕ, ರಾಜಣ್ಣ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.