ಮಂಗಳೂರು| ಜ.2ರಂದು ವಿದ್ಯುತ್ ನಿಲುಗಡೆ
ಮಂಗಳೂರು,ಡಿ.31: ಕಾವೂರು ಉಪಕೇಂದ್ರದಿಂದ ಹೊರಡುವ ವಾಮಂಜೂರು ಫೀಡರ್ ವ್ಯಾಪ್ತಿಯಲ್ಲಿ ಜ.2ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಈ ಫೀಡರ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಪಚ್ಚನಾಡಿ, ದೇವಿನಗರ, ವಾಮಂಜೂರು, ಮಂಗಳಾನಗರ, ಅಮೃತನಗರ, ಆರ್‌ಟಿಒ ಟೆಸ್ಟ್ ಯಾರ್ಡ್, ಕೆ.ಹೆಚ್.ಬಿ. ಲೇಔಟ್, ಸಂತೋಷ ನಗರ, ಕಸ್ಟಮ್ಸ್ ಕಾಲನಿ, ಚೆಕ್ ಪೋಸ್ಟ್, ಪಿಲಿಕುಲ, ಮಂಗಳಾಜ್ಯೋತಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ ಮಂಗಳಾದೇವಿ ಫೀಡರ್ ಹಾಗೂ ಕಂಕನಾಡಿ ಉಪಕೇಂದ್ರದಿಂದ ಹೊರಡುವ ಅತ್ತಾವರ ಫೀಡರ್ ವ್ಯಾಪ್ತಿಗಳಲ್ಲಿ ಜ.2ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಅಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಈ ಫೀಡರ್ ಗಳಲ್ಲಿ ಮಾದರಿ ಉಪವಿಭಾಗದ ಯೋಜನೆಯಡಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕಂಕನಾಡಿ, ಫಳ್ನೀರ್, ಹೈಲ್ಯಾಂಡ್ ಹಾಸ್ಪಿಟಲ್, ಕಂಕನಾಡಿ, ವೆಲೆನ್ಸಿಯ, ಸೈಂಟ್ ಜೋಸೆಫ್ ನಗರ, ಬಿ.ವಿ. ರೋಡ್, ಗೋರಿಗುಡ್ಡ, ಉಜ್ಜೋಡಿ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.