ನಿರುದ್ಯೋಗಿ ವಿಕಲಚೇತನರಿಗೆ ಕೌಶಲ್ಯ ತರಬೇತಿ
Update: 2025-01-03 15:24 GMT
ಮಂಗಳೂರು, ಜ.3: ಮಂಗಳೂರಿನ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಜಿಲ್ಲೆಯ ಯುವ ನಿರುದ್ಯೋಗಿ ವಿಕಲಚೇತನ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಪೂರ್ವ ಕೌಶಲ್ಯ ತರಬೇತಿ ಶಿಬಿರವನ್ನು ಜ.6ರ ಸೋಮವಾರದಿಂದ ಪ್ರಾರಂಭಿಸಲಿದೆ.
18ರಿಂದ 35 ವರ್ಷದೊಳಗಿನ ನಿರುದ್ಯೋಗಿ ವಿಕಲಚೇತನರು ಶಿಬಿರದಲ್ಲಿ ಭಾಗವಹಿಸಿ, ಸ್ಥಳೀಯ ಉದ್ಯೋಗ ಅವಕಾಶಗಳನ್ನು ಪಡೆದುಕೊಳ್ಳುವಂತೆ ಎಪಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಶ್ರೀಧರ್ (ಮೊಬೈಲ್: 9535225693) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.