ಜ. 11,12 ರಂದು ಅಜ್ಜಿನಡ್ಕ ಮಸೀದಿಯಲ್ಲಿ ಸ್ವಲಾತ್ ವಾರ್ಷಿಕ
Update: 2025-01-05 18:18 GMT
ಕೋಟೆಕಾರ್: ಬದ್ರಿಯಾ ಜುಮಾ ಮಸ್ಜಿದ್ ಅಜ್ಜಿನಡ್ಕ ಇಲ್ಲಿ ನಡೆಯುವ ದಿಕ್ರ್ ಹಲ್ಕಾ ಮತ್ತು ಸ್ವಲಾತ್ ಮಜ್ಲಿಸ್ ನ 19 ನೇ ವಾರ್ಷಿಕವು ಜ. 11, 12 ರಂದು ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ ಅಧ್ಯಕ್ಷತೆಯಲ್ಲಿ ಮಸೀದಿ ವಠಾರದಲ್ಲಿ ರಾತ್ರಿ 7-30 ಕ್ಕೆ ಜರಗಲಿದೆ.
ಜನವರಿ 11 ರಂದು ಅಸೈಯ್ಯದ್ ಆಮೀರ್ ತಂಙಲ್ ಅಲ್ ಬುಖಾರಿ ಕಿನ್ಯ ದುಆ ನೆರವೇರಸಿಲಿದ್ದಾರೆ. ಇಬ್ರಾಹಿಂ ಫ್ಯೆಝಿ ಉಚ್ಚಿಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ. ಪಿ ಹುಸ್ಯೆನ್ ಸಹದಿ ಕೆ. ಸಿ ರೋಡು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜ.12 ರಂದು ಅಸೈಯ್ಯದ್ ಜಲಾಲುದ್ದೀನ್ ಜಮಲುಲ್ಲ್ಯೆಲಿ ತಂಙಳ್ ಪಾತೂರ್ ರವರ ನೇತೃತ್ವದಲ್ಲಿ ಧ್ಸಿಕ್ರ್ ಹಲ್ಕಾ ಸ್ವಲಾತ್ ಮಜ್ಲಿಸ್ ನಡೆಯಲಿದ್ದು , ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.