ಮಂಗಳೂರು: ಡಾ.ತುಂಬೆ ಮೊಯ್ದಿನ್ ರಿಗೆ ಸನ್ಮಾನ
ಮಂಗಳೂರು: ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿನ ಸೇವೆಗಾಗಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಬಿರುದು ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಂಬೆ ಗ್ರೂಪ್ ಆಫ್ ಕಂಪನಿ ಮತ್ತು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಆಡಳಿತ ನಿರ್ದೇಶಕ ಡಾ.ತುಂಬೆ ಮೊಯ್ದಿನ್ ರನ್ನು ದ.ಕ. ಜಿಲ್ಲಾ ಖಾಝಿ ಹಾಗೂ ದಾರುನ್ನೂರ್ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಸದಸ್ಯರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಅವರ ಪುತ್ರ ಶಾಫಿ ಹಾಜಿ, ದಾರುನ್ನೂರ್ ಎಜುಕೇಶನ್ ಸೆಂಟರ್ ನ ಮುದರ್ರಿಸ್ ಹುಸೈನ್ ರಹ್ಮಾನಿ, ಜಿಲ್ಲಾ ವಕ್ಫ್ ಬೋರ್ಡ್ ನ ಉಪಾಧ್ಯಕ್ಷ ಪಕೀರಬ್ಬ ಮಾಸ್ಟರ್, ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ದಾರುನ್ನೂರಿನ ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಸಮದ್, ಕೋಶಾಧಿಕಾರಿ ಉಸ್ಮಾನ್ ಏರ್ ಇಂಡಿಯಾ, ಅಬೂಬಕರ್ ಸಿದ್ದೀಕ್ ಹುದವಿ ಅಲ್ ಅಝ್ಹರಿ, ಸದಸ್ಯರಾದ ಅಬ್ದುಲ್ ಜಲೀಲ್, ಮ್ಯಾನೇಜರ್ ಅಬ್ದುಲ್ ಹಕಿಂ, ಸೈಫ್ ಮೊದಲಾದವರು ಉಪಸ್ಥಿತರಿದ್ದರು.