ಮಂಗಳೂರು | ರಿವಾಲ್ವರ್ ಪರಿಶೀಲನೆ ವೇಳೆ ಆಕಸ್ಮಿಕವಾಗಿ ಸಿಡಿದ ಗುಂಡು: ಓರ್ವನಿಗೆ ಗಾಯ
Update: 2025-01-07 06:52 GMT
ಮಂಗಳೂರು: ಪರಿಶೀಲನೆಯ ವೇಳೆ ರಿವಾಲ್ವರ್ ವೊಂದರಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ನಗರ ಹೊರವಲಯದ ವಾಮಂಜೂರಿನಲ್ಲಿ ನಡೆದಿರುವುದು ವರದಿಯಾಗಿದೆ.
ಗಾಯಗೊಂಡವರನ್ನು ಸಫ್ವಾನ್ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ.
ಅಂಗಡಿಯೊಂದಕ್ಕೆ ಬಂದಿದ್ದ ಗ್ರಾಹಕರು ಇಟ್ಟಿದ್ದ ರಿವಾಲ್ವರ್ ನ್ನು ಸಫ್ವಾನ್ ಪರೀಕ್ಷಿಸುತ್ತಿದ್ದಾಗ ಅದರಲ್ಲಿದ್ದ ಗುಂಡು ಆಕಸ್ಮಿಕವಾಗಿ ಸಿಡಿದಿದೆ ಎನ್ನಲಾಗಿದೆ. ಇದರಿಂದ ಸಫ್ವಾನ್ ರ ಹೊಟ್ಟೆಗೆ ಗುಂಡು ತಗುಲಿ ಗಾಯವಾಗಿದೆ. ಸಫ್ವಾನ್ ಕೂಡ ಗ್ರಾಹಕರಾಗಿ ಅಂಗಡಿಗೆ ಬಂದಿದ್ದರು ಎಂದು ಹೇಳಲಾಗಿದೆ.
ಇದೊಂದು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.