ಉಳ್ಳಾಲ: ಮಾಹಿರ್ ಫೌಂಡೇಶನ್ ವತಿಯಿಂದ ರಕ್ತದಾನ, ವೈದ್ಯಕೀಯ ಶಿಬಿರ
ಉಳ್ಳಾಲ: ಮಾಹಿರ್ ಫೌಂಡೇಶನ್ ಇದರ ಆಶ್ರಯದಲ್ಲಿ ಜ.23 ರಿಂದ ಜ.26 ರ ವರೆಗೆ ಭಾರತ್ ಸ್ಕೂಲ್ ಗ್ರೌಂಡ್ ನಲ್ಲಿ ನಡೆಯಲಿರುವ ಮಾಹಿರ್ ಪ್ರೇಮಿಯರ್ ಲೀಗ್ 2025 ಪ್ರಯುಕ್ತ ಮಾಹಿರ್ ಫೌಂಡೇಶನ್ , ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಹಾಗೂ ಯೆನಪೋಯ ಆಸ್ಪತ್ರೆ ರಕ್ತ ನಿಧಿ ಇವರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಹಾಗೂ ವೈದ್ಯಕೀಯ, ಕಣ್ಣು ತಪಾಸಣೆ ಶಿಬಿರವು ಜ.26 ಭಾನುವಾರ ಭಾರತ್ ಸ್ಕೂಲ್ ನಲ್ಲಿ ನಡೆಯಲಿದ್ದು,ಈ ಶಿಬಿರ ದಲ್ಲಿ ಅರ್ಹರಿಗೆ ಉಚಿತ ಕನ್ನಡಕ ಹಾಗೂ ಔಷಧಿ ವಿತರಣೆ ಕೂಡ ನಡೆಯಲಿದೆ ಎಂದು ಮಾಹಿರ್ ಫೌಂಡೇಶನ್ ಸಂಚಾಲಕ ಝಾಕೀರ್ ಇಕ್ಲಾಸ್ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಪ್ರಯುಕ್ತ ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನ್ನ ದಾನ ಹಾಗೂ ಹೆಣ್ಣು ಹಂಪಲು ವಿತರಣೆ ನಡೆಯಲಿದೆ.
ಜ.25 ಶನಿವಾರ ಸಂಜೆ 4 ಗಂಟೆಗೆ ಮಾಸ್ತಿಕಟ್ಟೆ ಯಿಂದ ಭಾರತ್ ಸ್ಕೂಲ್ ಮೈದಾನದ ವರೆಗೆ ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ರಕ್ತದಾನ ಶಿಬಿರದ ಪ್ರಯೋಜನದ ಅರಿವು ಮೂಡಿಸಲು ಜನ ಜಾಗೃತಿ ಜಾಥಾ ನಡೆಯಲಿದೆ.ಆಲಿಯಾ ನರ್ಸಿಂಗ್ ಕಾಲೇಜ್ ಅಬ್ಬಕ್ಕ ಸರ್ಕಲ್ ,ಮತ್ತು ಸೆಯ್ಯದ್ ಮದನಿ ಅರಬಿಕ್ ಕಾಲೇಜ್ ಉಳ್ಳಾಲ ಇದರ ವಿದ್ಯಾರ್ಥಿಗಳಿಂದ ಹಾಗೂ ಸಾರ್ವಜನಿಕರಿಂದ ಕಾಲ್ನಡಿಗೆ ಜಾಥಾ ಕೂಡಾ ನಡೆಯಲಿದೆ ಎಂದು ಅವರು ಹೇಳಿದರು.
ಅಲ್ಲದೇ ಅರ್ಹ ಫಲಾನುಭವಿಗಳಿಗೆ ಉಚಿತ ವೀಲ್‌ಚೇರ್ ಹಾಗೂ ಹೊಲಿಗೆ ಯಂತ್ರ ವಿತರಣೆ ಮಾಡಲು ನಿರ್ಧರಿಸಲಾಗಿದೆ.ಉಚಿತವಾಗಿ ವೀಲ್ ಚೇರ್ ಹಾಗೂ ಹೊಲಿಗೆ ಯಂತ್ರ ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಇದರಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸುವ ಫಲಾನುಭವಿಗಳು 7899855433 ನಂಬರಿಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು
ಸುದ್ದಿ ಗೋಷ್ಠಿ ಯಲ್ಲಿ ಮಾಹಿರ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಶಾಕಿರ್, ಗೌರವ ಅಧ್ಯಕ್ಷ ಫೈಝಲ್ ಕುದ್ರೋಳಿ, ಮುಹಮ್ಮದ್ ಶರೀಫ್, ರಶೀದ್ ಯೂಸುಫ್, ಕೌನ್ಸಿಲರ್ ಖಲೀಲ್ ಇಬ್ರಾಹಿಂ. ಐ ಉಪಸ್ಥಿತರಿದ್ದರು.