ಸಾಹಿತ್ಯ ಸಮ್ಮೇಳನಗಳು ವಿದ್ಯಾರ್ಥಿಗಳಿಗೆ ವೇದಿಕೆ: ಸುಮಾಪ್ರಸಾದ್

Update: 2025-01-05 13:15 GMT

ಕೊಣಾಜೆ: ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನದಿಂದ ವಿದ್ಯಾರ್ಥಿಗಳ ಪ್ರತಿಭೆಗೆ ಒಂದು ಅವಕಾಶ ಮಾತ್ರವಲ್ಲದೇ ಸಾಹಿತ್ಯಾತ್ಮಕ ವಿಚಾರಗಳಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿರುಚಿ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಇದರ ಸಂಪೂರ್ಣ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಯಕ್ಷಾಂಗಣ ಮಂಗಳೂರು ಇದರ ಕಾರ್ಯದರ್ಶಿ ಸುಮಾಪ್ರಸಾದ್ ಅಭಿಪ್ರಾಯ ಪಟ್ಟರು

ಇವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕ , ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಮಂಗಳೂರು ದಕ್ಷಿಣ ವಲಯ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ, ಪಾವೂರು ಹರೇಕಳ ಸಂಯುಕ್ತ ಆಶಯದಲ್ಲಿ ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಉಳ್ಳಾಲ ತಾಲೂಕು ಪ್ರಥಮವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಕುಮಾರಿ ಫಾತಿಮತ್ ರಫೀದಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಸಪಾ ಉಳ್ಳಾಲ ಹೋಬಳಿ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ ಪಿ ರೈ ಅವರು ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಕಡೆ ಪ್ರೇರಣೆ ಹೊಂದಲು ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು.

ಸಮ್ಮೇಳನದಲ್ಲಿ ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ ಮತ್ತು ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಹರೇಕಳ ಇಲ್ಲಿನ ವಿದ್ಯಾರ್ಥಿಗಳಿಂದ ಕನ್ನಡ ನಾಡು - ನುಡಿ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ಗೊಂಡಿತು.

ವೇದಿಕೆಯಲ್ಲಿ ಕಸಪಾ ಉಳ್ಳಾಲ ಘಟಕ ಕಾರ್ಯದರ್ಶಿ ಎಡ್ವಾರ್ಡ್ ಲೋಬೊ, ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರಾಧಾಕೃಷ್ಣ ರೈ, ಸಮಾಜ ಸೇವಕರಾದ ಪ್ರಸಾದ್ ರೈ ಕಲ್ಲಿಮಾರ್,ಸಮ್ಮೇಳನ ಸಂಚಾಲಕರಾದ ತ್ಯಾಗಮ್ ಹರೇಕಳ, ಶಿಕ್ಷಕರುಗಳಾದ ಮೋಹಿನಿ, ಕುಮುದ, ಕೃಷ್ಣ ಶಾಸ್ತ್ರಿ, ಶಿವಣ್ಣ, ಸ್ಮಿತಾ, ಮೋಹನ್ ಮೊದಾಲಾದವರು ಉಪಸ್ಥಿತರಿದ್ದರು.

ಕಸಪಾ ಪ್ರದಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು, .ಶಿಕ್ಷಕರಾದ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿಗೆ ಕನ್ನಡ ಸಾಹಿತ್ಯ ಪರಿಷತ್ತು ಘಟಕವು ವಿದ್ಯಾರ್ಥಿ ನಡೆ ಸಾಹಿತ್ಯದ ಕಡೆಗೆ ಎನ್ನುವ ಸಂಕಲ್ಪದೊಂದಿಗೆ ವಿವಿಧ ಶಾಲೆಗಳಿಗೆ ತೆರಳಿ ಸಾಹಿತ್ಯತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಎಲ್ಲಾ ಗೋಷ್ಠಿ ಗಳನ್ನು ಕೂಡ ವಿಭಿನ್ನತೆಯೊಂದಿಗೆ ಸಂಘಟಿಸಿದ್ದು, ವಿದ್ಯಾರ್ಥಿಗಳು ಬಹಳ ಆಸಕ್ತಿಯಿಂದ ಭಾಗವಹಿಸಿದ್ದು ಖುಷಿ ಕೊಟ್ಟಿದೆ.

ತ್ಯಾಗಮ್ ಹರೇಕಳ, ಸಮ್ಮೇಳನ ಸಂಚಾಲಕರು

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News