ಯೆನೆಪೋಯ ನರ್ಸಿಂಗ್ ಕಾಲೇಜಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ
ಮಂಗಳೂರು, ಜ.5: ಯೆನೆಪೋಯ ನರ್ಸಿಂಗ್ ಕಾಲೇಜಿನ 23ನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ಮತ್ತು 21ನೇ ವರ್ಷದ ಜನರಲ್ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಮತ್ತು ಪ್ರಮಾಣ ವಚನ ಸ್ವೀಕಾರ ಸಮಾರಂಭವು ಶನಿವಾರ ಯೇನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಯೆಂಡ್ಯೂರನ್ಸ್ ಸಭಾಂಗಣದಲ್ಲಿ ನಡೆಯಿತು. 183 ವಿದ್ಯಾರ್ಥಿಗಳು ದೀಪವನ್ನು ಬೆಳಗಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಿಟ್ಟೆ ವಿವಿಯ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸಯನ್ಸಸ್ ಪ್ರಾಂಶುಪಾಲೆ ಡಾ. ಫಾತಿಮ ಡಿ ಸಿಲ್ವ ಮಾತನಾಡಿ ಈ ವೃತಿಯಲ್ಲಿ ವಿದ್ಯಾರ್ಥಿಗಳು ಹಲವು ಅಡೆತಡೆಗಲ್ಲನ್ನು ಎದುರಿಸಬಹುದು . ಆದರೂ ವಿದ್ಯಾರ್ಥಿಗಳಿಗೆ ಅಪಾರ ವೈಯಕ್ತಿಕ ಮತ್ತು ವೃತ್ತಿಪರ ಪ್ರತಿಫಲಗಳನ್ನು ನೀಡುತ್ತದೆ ಎಂದು ಹೇಳಿದರು.
ಯೆನೆಪೋಯ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಅಧೀಕ್ಷಕ ಡಾ. ಹಬೀಬ್ ರಹ್ಮಾನ್ ಹಾಗೂ ನರ್ಸಿಂಗ್ ಅಧೀಕ್ಷಕಿ ಸತ್ಯದೇವಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಾಂಶುಪಾಲರಾದ ಡಾ. ಲೀನಾ ಕೆ. ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ‘ ಶುಶ್ರೂಷಾ ವೃತ್ತಿಯ ಪ್ರಮುಖ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಹ ಪ್ರಾಧ್ಯಾಪಕ ಡಾ. ರೆನಿಟ ಪ್ರಿಯ ಡಿಸೋಜ , ಉಪಪ್ರಾಂಶುಪಾಲೆ ಡಾ. ಪ್ರಿಯ ರೇಷ್ಮಾ ಅರನ್ಹ ಯೆನೆಪೋಯ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿಯ ಪ್ರತಿಜ್ಞಾವಿಧಿ ಬೋಧಿಸಿದರು.
ಪವಿತ್ರ ಸ್ವಾಗತಿಸಿ, ಮೆಲ್ವಿನ್ ಜೆಕೋಬ್ ವಂದಿಸಿದರು. ಜ್ಯೋತಿ ಮತ್ತು ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.