ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್ ಕಚೇರಿ ಉದ್ಘಾಟನೆ
ಉಳ್ಳಾಲ: ಕಳೆದ 14 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವಾ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಿಡ್ನಿ ಸಹಿತ ನೂರಾರು ರೋಗಿಗಳ ಚಿಕಿತ್ಸೆಗೆ ಧನ ಸಹಾಯ, ನಿರುದ್ಯೋಗಿಗಳಿಗೆ ಸ್ವ-ಉದ್ಯೋಗ, ಸಂತ್ರಸ್ತ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಸಹಿತ ಅನೇಕ ನೆರವು ಚಟುವಟಿಕೆಗಳ ಮೂಲಕ ಜನಪ್ರಿಯವಾಗಿರುವ ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್‌ನ ನೂತನ ಕಚೇರಿಯು ಉಳ್ಳಾಲ ಮಾಸ್ತಿಕಟ್ಟೆ ಜಂಕ್ಷನ್‌ನ ಹಾಶಿಂ ಟವರ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಉಳ್ಳಾಲ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಅಹ್ಮದ್ ಸಖಾಫಿ ಉದ್ಘಾಟಿಸಿದರು. ಸಯ್ಯಿದ್ ಮಶ್‌ಹೂದ್ ತಂಙಳ್ ಕೂರತ್ ದುಆಗೈದರು. ಯು.ಟಿ.ಎಂ. ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಫಾರೂಕ್ ಅಬ್ಬಾಸ್ ಹಾಜಿ ಉಳ್ಳಾಲ ಸ್ವಾಗತಿಸಿದರು. ಅತಿಥಿ ಯಾಗಿ ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ, ಸೈಯದ್ ಜಲಾಲ್ ತಂಙಳ್, ಸೈಯದ್ ಝಿಯಾದ್ ತಂಙಳ್, ಯು.ಟಿ.ಎಂ. ಪ್ರಧಾನ ಕಾರ್ಯದರ್ಶಿ ಹಾಜಿ ಮೊಯ್ದಿನ್ ಮೊಂಟೆಪದವು, ಕೋಶಾಧಿಕಾರಿ ಬಶೀರ್ ಮತ್ತಿತರರು ಉಪಸ್ಥಿತರಿದ್ದರು.
ಹಾಜಿ ಮೊಯ್ದಿನ್ ಮೊಂಟೆಪದವು ವಂದಿಸಿದರು.