ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಸೆರೆ
Update: 2025-01-03 16:10 GMT
ಮಂಗಳೂರು: ನಗರ ಹೊರವಲಯದ ಪಿಲಿಕುಳ ದೂರದರ್ಶನ ಕೇಂದ್ರದ ಮುಂದಿನ ಗೇಟ್‌ನ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂಡ ಗ್ರಾಮದ ಜೋಡುಮಾರ್ಗ ಗೂಡಿನ ಬಳಿ ನಿವಾಸಿಗಳಾದ ಆಸಿಫ್ (34) ಮತ್ತು ನಿಯಾಝ್ ಎನ್.ಎ. (40) ಎಂಬವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಜ.2ರಂದು ಅಕ್ರಮವಾಗಿ ಗಾಂಜಾವನ್ನು ತಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳಿಗೆ ಸುಮಾರು 20 ಸಾವಿರ ರೂ. ಮೌಲ್ಯದ 958 ಗ್ರಾಂ ಗಾಂಜಾ, ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕ ಕೆ.ಆರ್.ಶಿವಕುಮಾರ್, ಎಸ್ಸೈಗಳಾದ ಅರುಣ್ ಕುಮಾರ್ ಡಿ., ಪುನೀತ್, ಸಿಬ್ಬಂದಿಗಳಾದ ಸಾಜುನಾಯರ್, ಮಹೇಶ್, ಅಕ್ಕರ್ ಮತ್ತು ತಿರುಮಲೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.