ಜ. 2ರಂದು ಕೊಡಂಗಾಯಿ ಮಸ್ಜಿದ್, ಶಂಸುಲ್ ಹುದಾ ಮದ್ರಸ ಉದ್ಘಾಟನೆ

Update: 2025-01-01 12:36 GMT

ವಿಟ್ಲ: ಕೊಡಂಗಾಯಿ ರಾಧುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಲಾದ ಮಸ್ಜಿದ್ ಯಾಸೀನ್ ಹಾಗೂ ಶಂಸುಲ್ ಹುದಾ ಮದ್ರಸ ಕಟ್ಟಡದ ಉದ್ಘಾಟನೆ ಹಾಗೂ ಏಕದಿನ ಧಾರ್ಮಿಕ ಮತ ಪ್ರಭಾಷಣ ಜ. 2ರ ಸಂಜೆ 5 ಗಂಟೆಗೆ ಕೊಡಂಗಾಯಿ ರಾಧುಕಟ್ಟೆಯಲ್ಲಿ ನಡೆಯಲಿದೆ.

ಅಸ್ಸಯ್ಯಿದ್ ಮುಹೀನ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿದ್ದಾರೆ. ವಕ್ಫ್ ನಿರ್ವಹಣೆಯನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹ್ ಹರಿ ಅವರು ನೆರವೇರಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆ ಹಾಗೂ ಮದ್ರಸ ಉದ್ಘಾಟನೆಯನ್ನು ಕೊಡಂಗಾಯಿ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ ಅಸ್ಸಯ್ಯಿದ್ ಪೂಕುಂಞ ತಂಙಳ್ ಉದ್ಯಾವರ ಅವರು ನೆರವೇರಿಸುವರು.

ಸಮಾರಂಭದಲ್ಲಿ ಖಾಝಿ ಬಂಬ್ರಾಣ ಉಸ್ತಾದ್, ಬಿ ಎ ಸಿದ್ದೀಕ್ ಅರ್ಷದಿ, ಕೆ ಬಿ ದಾರಿಮಿ, ಕೆ ಕೆ ಇಸ್ಮಾಯಿಲ್ ಮುಸ್ಲಿಯಾರ್, ಸುಲೈಮಾನ್ ಹಾಜಿ ಬೈತಡ್ಕ, ಕೆ.ಎಂ.ಎ.ಕೊಡುಂಗಾಯಿ ಮೊದಲಾದ ಹಲವಾರು ಗಣ್ಯರು ಭಾಗವಹಿಸುವರು ಎಂದು ಸ್ವಾಗತ ಸಮಿತಿಯ ಫಾರೂಕ್ ಕುಂಡಡ್ಕ, ಮುಹಮ್ಮದ್ ಮಾಮು, ಹಮೀದ್ ಟಿ, ಅಬ್ದುಲ್ ಮಜೀದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News