ಮಂಜನಾಡಿ : ದ್ಸಿಕ್ರ್ ಹಲ್ಕಾದ 39ನೇ ವಾರ್ಷಿಕ ಕಾರ್ಯಕ್ರಮ
ದೇರಳಕಟ್ಟೆ : ಬುಸ್ತಾನುಲ್ ಉಲೂಂ ದರ್ಸ್ ಹಾಗೂ ಕೇಂದ್ರ ಜುಮ್ಮಾ ಮಸೀದಿ ಮಂಜನಾಡಿ ಇದರ ಆಶ್ರಯದಲ್ಲಿ ಪ್ರತಿ ವಾರ ನಡೆಸಿ ಕೊಂಡು ಬರುವ ದ್ಸಿಕ್ರ್ ಹಲ್ಕಾದ 39 ನೇ ವಾರ್ಷಿಕ ಕಾರ್ಯ ಕ್ರಮವು ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ರವಿವಾರ ನಡೆಯಿತು.
ಅಶ್ರಫ್ ತಂಙಳ್ ಆದೂರು ದ್ಸಿಕ್ರ್ ಹಲ್ಕಾ ಕಾರ್ಯಕ್ರಮ ದ ನೇತೃತ್ವ ವಹಿಸಿದ್ದರು. ಮಂಜನಾಡಿ ಮಸೀದಿ ಮುದರ್ರಿಸ್ ಅಹ್ಮದ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಿದರು.
ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಸಹಾಯಕ ಮುದರ್ರಿಸ್ ಮಸೂದ್ ಸ ಅದಿ ಮಂಜನಾಡಿ ಕೇಂದ್ರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಆಲಿ ಕುಂಞಿ ಪಾರೆ,ಉಪಾಧ್ಯಕ್ಷ ಎನ್ ಎಸ್ ಕರೀಂ, ಮೊಯ್ದಿನ್ ಕುಟ್ಟಿ, ಕಾರ್ಯದರ್ಶಿಗಳಾದ ಎನ್ ಐ ಮೊಹಮ್ಮದ್, ಹಮೀದ್ ಆರಂಗಡಿ, ಬಾಪಕುಂಞ, ಅಬ್ದುಲ್ ರಹಿಮಾನ್ ಹಾಜಿ ಮೋರ್ಲ, ಕೆಎಂಕೆ ಮಂಜನಾಡಿ ಉಪಸ್ಥಿತರಿದ್ದರು. ಇಬ್ರಾಹಿಂ ಅಹ್ಸನಿ ವಂದಿಸಿದರು.