ಜ. 9 ರಿಂದ ಕನ್ಯಾನ ವಲಿಯುಲ್ಲಾಹಿ ಉರೂಸ್ ಸಮಾರಂಭ

Update: 2024-10-23 14:59 GMT

ವಿಟ್ಲ: ಕನ್ಯಾನ ಹಝ್ರತ್ ಅಸ್ಸಯ್ಯಿದ್ ಶಾಹುಲ್ ಹಮೀದ್ ವಲಿಯುಲ್ಲಾಹಿ (ಖ ಸಿ) ಅವರ ಉರೂಸ್ ಸಮಾರಂಭ ಜ.9 ರಿಂದ 18 ತನಕ ನಡೆಯಲಿದೆ ಎಂದು ಖಾಝಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದ್ ಅವರು ಘೋಷಣೆ ಮಾಡಿದ್ದಾರೆ.

ಜನವರಿ 9 ರಿಂದ 18 ತನಕ ಧಾರ್ಮಿಕ ಪ್ರವಚನ ಮತ್ತು ಜವನರಿ 19 ಹಗಲು ಉರೂಸ್ ಮತ್ತು ಅನ್ನದಾನ ನಡೆಯಲಿದೆ ಎಂಬುದರ ಬಗ್ಗೆ ಖಾಝಿ ಎಪಿ ಉಸ್ತಾದ್ ಅವರು ಘೋಷಣೆ ಮಾಡಿದ್ದಾರೆ ಎಂದು ಕನ್ಯಾನ ಆರ್.ಜೆ.ಎಂ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News