ಡಾ. ರಾಜಾರಾಮ್ ಕೆ.ಬಿ. ಹೆಸರಲ್ಲಿ ನಕಲಿ ಇನ್ಸ್ಟ್ರಾಗ್ರಾಮ್ ಖಾತೆ: ದೂರು ದಾಖಲು

Update: 2024-10-23 14:57 GMT

ನಕಲಿ ಖಾತೆ

ಉಪ್ಪಿನಂಗಡಿ: ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಪ್ಪಿನಂಗಡಿಯಲ್ಲಿ ಜನಪ್ರಿಯ ದಂತವೈದ್ಯರಾಗಿರುವ ಡಾ. ರಾಜಾರಾಮ ಕೆ.ಬಿ.ಯವರ ಹೆಸರಿನಲ್ಲಿ ವಂಚಕರ ಜಾಲವೊಂದು ಇನ್ಸ್ಟ್ರಾಗ್ರಾಮ್ ನಕಲಿ ಖಾತೆಯನ್ನು ಸೃಷ್ಟಿಸಿ ಸಾರ್ವಜನಿಕರಿಂದ ಹಣವನ್ನು ಕೇಳಲಾಗುತ್ತಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಡಾ. ರಾಜಾರಾಮ ಕೆ.ಬಿ.ಯವರು, ತನ್ನ ಹೆಸರು ಮತ್ತು ಭಾವಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್‍ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಹಲವರಿಗೆ ಹಣಕ್ಕಾಗಿ ಸಂದೇಶವನ್ನು ಕಳುಹಿಸುತ್ತಿರುವ ಕೃತ್ಯವು ಗಮನಕ್ಕೆ ಬಂದಿರುವುದರಿಂದ ಈ ಕೃತ್ಯಗೈದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ ಹಾಗೂ ಪ್ರಸಕ್ತ ದಿನಗಳಲ್ಲಿ ಬಗೆ ಬಗೆಯ ರೂಪದಲ್ಲಿ ಸಾರ್ವಜ ನಿಕರನ್ನು ವಂಚಿಸುವ ಕೃತ್ಯಗಳು ಎಲ್ಲೆಡೆ ನಡೆಯುತ್ತಿರುವುದರಿಂದ ನಾಗರಿಕ ಸಮಾಜ ಜಾಗೃತಗೊಳ್ಳಬೇಕಾಗಿದೆ ಎಂದು ಅವರು ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News