ಅ.1 ಭಾರತೀಯ ಕೆಥೋಲಿಕ್ ಪತ್ರಕರ್ತರ ಸಮಾವೇಶ; ಪ್ರಶಸ್ತಿ ವಿತರಣಾ ಕಾರ್ಯಕ್ರಮ

Update: 2024-09-29 14:47 GMT

ಮಂಗಳೂರು, ಸೆ.29: ಭಾರತೀಯ ಕೆಥೋಲಿಕ್ ಪತ್ರಕರ್ತರ ಸಂಘಟನೆ ಆಯೋಜಿಸಿರುವ 29ನೇ ವಾರ್ಷಿಕ ಸಮಾವೇಶ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ಅ.1 ಮತ್ತು 2ರಂದು ಮಂಗಳೂರಿನ ನಂತೂರು ಬಳಿಯ ಸಿಒಡಿಪಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.

ಸಮಾವೇಶವನ್ನು ಮಂಗಳೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಪೀಟರ್ ಪೌಲ್ ಸಲ್ದಾನ ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಐವನ್ ಡಿಸೋಜ ಹಾಗೂ ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹೆನ್ರಿ ಡಿಸೋಜ ಭಾಗವಹಿಸಲಿದ್ದಾರೆ.

ಅ.2 ರಂದು ತಜ್ಞ ಮಂಡಳಿಯಿಂದ, ಗಾಂಧೀಜಿಯವರ ತತ್ವಗಳಾದ ಸತ್ಯ ಅಹಿಂಸೆ ಮತ್ತು ನ್ಯಾಯವನ್ನು ಎತ್ತಿ ಹಿಡಿಯು ವಲ್ಲಿ ಪತ್ರಕರ್ತರ ಪಾತ್ರ ಎಂಬ ವಿಷಯ ಮಂಡನೆ ನಡೆಯಲಿದೆ.ಕರ್ನಾಟಕ ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ , ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಸಾಮಾ ಜಿಕ ಕಾರ್ಯಕರ್ತೆ ಮತ್ತು ಬರಹಗಾರರಾದ ಡಾ. ಅನ್ನಪೂರ್ಣ ಎಚ್ ಎಸ್ ಹಾಗೂ ಲೇಖಕ ಮತ್ತು ವಿಚಾರವಾದಿ ಡಾ. ಸೆಡ್ರಿಕ್ ಪ್ರಕಾಶ್ ಎಸ್ ಜೆ ವಿಷಯ ಮಂಡನೆ ಮಾಡಲಿದ್ದಾರೆ. ಮುಂಬೈ ಎಕ್ಸಾಮಿನಾರ್ ಪತ್ರಿಕೆಯ ಸಂಪಾದಕ ಜೋಷನ್ ರೊಡ್ರಿಗಸ್ ಕಲಾಪವನ್ನು ನಿರ್ವಹಿಸಲಿದ್ದಾರೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾ ಗಿರುವ ಯು ಟಿ ಖಾದರ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡಾ. ಶೈಯ್ಸನ್ ಟಿ ಯುಸೇಫ್, ವಿನಾಯಕ ನಿರ್ಮಲ್ ಹಾಗೂ ದಿ ನ್ಯೂ ಲೀಡರ್ ವಾರ ಪತ್ರಿಕೆಗೆ ಉತ್ತಮ ಪತ್ರಿಕೋದ್ಯಮದ ಪ್ರಶಸ್ತಿಯನ್ನು ನೀಡಲಾಗುತ್ತದೆ. ಎಂದು ಸಂಘಟನಾ ಕಾರ್ಯದರ್ಶಿ ಫಾ. ರೂಪೇಶ್ ಮಾಡ್ತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News