ಜ.17: ವಿವಿಧ ಕಾರ್ಯಕ್ರಮದ ಹಿನ್ನಲೆ; ಸಂಚಾರ ದಟ್ಟಣೆ ತಪ್ಪಿಸಲು ಮನವಿ

Update: 2025-01-16 14:31 GMT

ಮಂಗಳೂರು, ಜ.16: ನಗರದಲ್ಲಿ ಜ.17ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿರುವ ಕಾರಣ ಸಂಚಾರ ದಟ್ಟಣೆ ತಪ್ಪಿಸಲು ವಾಹನಿಗರು ಸಹಕರಿಸುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಜ.17ರಂದು ಮೇರಿಹಿಲ್‌ನಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾದೇಶಿಕ ಕಚೇರಿಗೆ ಶಂಕು ಸ್ಥಾಪನೆ, ಕರ್ನಾಟಕ ಸುವರ್ಣ ಸಂಭ್ರಮ-50ರ ಪ್ರಯುಕ್ತ ಪುರಭವನದಲ್ಲಿ ಬಹುಸಂಸ್ಕೃತಿ ಉತ್ಸವ, ಕರ್ನಾಟಕ ಕ್ರೀಡಾ ಕೂಟ 2025ರ ಉದ್ಘಾಟನಾ ಕಾರ್ಯಕ್ರಮವು ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.

ಹಾಗಾಗಿ ಬೆಳಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 6ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವವರು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವವರು ಈ ಅವಧಿಯನ್ನು ಹೊರತು ಪಡಿಸಿ ಮುಂಚಿತ ವಾಗಿ ತಲುಪತಕ್ಕದ್ದು.

*ಸಂಚಾರ ದಟ್ಟಣೆಯಾಗುವ ಮಾರ್ಗಗಳು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ - ಕಾವೂರು - ಬೋಂದೆಲ್ ಮೇರಿಹಿಲ್ ಜಂಕ್ಷನ್ ಕೆ.ಪಿ.ಟಿ. ವೃತ್ತ -ಬಂಟ್ಸ್ ಹಾಸ್ಟೆಲ್-ಹಂಪನಕಟ್ಟೆ - ಕ್ಲಾಕ್ ಟವರ್, ಬಲ್ಮಠ, ಕಂಕನಾಡಿ-ವೆಲೆನ್ಸಿಯಾ - ಪಿವಿಎಸ್ ಜಂಕ್ಷನ್ ಹ್ಯಾಮಿಲ್ಟನ್ ವೃತ್ತ - ರಾವ್ ಅ್ಯಂಡ್ ರಾವ್ ವೃತ್ತ, ಬಾವುಟಗುಡ್ಡೆ, ಲಾಲ್‌ಭಾಗ್ ನಾರಾಯಣಗುರು ವೃತ್ತ, ಮಂಗಳಾ ಸ್ಟೇಡಿಯಂ, ಕೆಎಸ್‌ಆರ್‌ಟಿಸಿ ಬಿಜೈ, ಸರ್ಕ್ಯೂಟ್ ಹೌಸ್, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.

ಈ ಮಾರ್ಗದಲ್ಲಿ ವಾಹನಗಳನ್ನು ವಿರುದ್ಧ ದಿಕ್ಕಿನಲ್ಲಿ ಪಾರ್ಕ್ ಮಾಡುವಂತಿಲ್ಲ. ಈ ಅವಧಿಯಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗದ ಮೂಲಕ ಸಂಚರಿಸಬೇಕು. ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸಬೇಕು. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್‌ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸಬೇಕು. ಅತಿಥಿ ಗಣ್ಯರು ಸಂಚರಿಸುವ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಎಲ್ಲಾ ತರಹದ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News