ಕಲಾವಿದ ರಾಮದಾಸ್ ಕಾಮತ್ ಶೇವ್‌ಗೂರ್ ನಿಧನ

Update: 2025-01-16 15:15 GMT

ಮಂಗಳೂರುನಗರದ ಖ್ಯಾತ ಕಲಾವಿದ, ಶೇವ್ಗೂರ್ ಫೈನ್ ಆರ್ಟ್ಸ್ ರಾಮದಾಸ್ ಕಾಮತ್ ಶೇವಗೂರ್ (78) ಬುಧವಾರ ಮಣಿಪಾಲದಲ್ಲಿ ನಿಧನರಾದರು.

ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ. ಮಂಗಳೂರಿನ ಪ್ರಸಿದ್ಧ ಶೇವ್ಗೂರ್ ಕಲಾವಿದರ ಕುಟುಂಬದ ಸದಸ್ಯರಾದ ರಾಮದಾಸ್ ಕಾಮತ್ ಶೇವ್ಗೂರ್ ಭಾವಚಿತ್ರದಲ್ಲಿ ಅದರಲ್ಲೂ ವಿಶೇಷವಾಗಿ ತೈಲವರ್ಣಚಿತ್ರ ದಲ್ಲಿ ಪ್ರಾವೀಣ್ಯತೆ ಹೊಂದಿದ್ದರು. ಕರಾವಳಿ ಜಿಲ್ಲೆಯಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಗೋಡೆ ಗಳನ್ನು ಅವರ ಜೀವ ಸದೃಶ ಭಾವಚಿತ್ರಗಳು ಅಲಂಕರಿಸುತ್ತಿವೆ. ವಿಶ್ವ ಕೊಂಕಣಿ ಕೇಂದ್ರದ ಹಾಲ್ ಆಫ್ ಫೇಮ್ನಲ್ಲಿ ಕಾಣ ಸಿಗುವ ಅನೇಕ ಗಣ್ಯವ್ಯಕ್ತಿಗಳ ಭಾವಚಿತ್ರಗಳು ಅವರ ಕೃತಿಗಳಾಗಿವೆ. ಐದು ದಶಕಗಳಲ್ಲಿ ವ್ಯಾಪಿಸಿರುವ ಅವರ ಸಮೃದ್ಧ ವೃತ್ತಿ ಜೀವನದ ಉದ್ದಕ್ಕೂ ಅವರು ಸಾವಿರಾರು ಭಾವಚಿತ್ರಗಳನ್ನು ಚಿತ್ರಿಸಿದ್ದರು. ವ್ಯಕ್ತಿಯ ಸಂಪೂರ್ಣ ವ್ಯಕ್ತಿತ್ವವನ್ನು-ಸತ್ವ ಮತ್ತು ಆತ್ಮವನ್ನು-ನಿಖರವಾಗಿ ಸೆರೆ ಹಿಡಿಯುವಲ್ಲಿ ಹೆಸರುವಾಸಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News