ಮಂಗಳೂರು: ಮೀಫ್ ಶಾಲಾಡಳಿತ ಮಂಡಳಿ ಪ್ರತಿನಿಧಿಗಳ ವಿಶೇಷ ಸಭೆ
ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಎಲ್ಲಾ ಅಧ್ಯಕ್ಷರು/ಸಂಚಾಲಕರು/ ಪ್ರಾಂಶುಪಾಲರು/ಮುಖ್ಯ ಶಿಕ್ಷಕರ ಸಭೆಯು ಬುಧವಾರನಗರದ ಕಂಕನಾಡಿಯಲ್ಲಿರುವ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಿತು.
ಸಂಸ್ಥೆಯ ಗೌರವಾಧ್ಯಕ್ಷ ಉಮರ್ ಟೀಕೆ ಮಾತನಾಡಿ ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಿ, ಜಾತ್ಯತೀತ ನೆಲೆಯಲ್ಲಿ ಈ ಸಂಸ್ಥೆಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
ವಿಶೇಷ ಆಮಂತ್ರಿತರಾಗಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ಅಧ್ಯಕ್ಷ ಬಿ.ಜೆ ಇಬ್ರಾಹಿಂ ಹಾಜಿ ಮತ್ತು ಯೆನೆಪೊಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ಬಹರೈನ್ ಇದರ ನಿರ್ದೇಶಕ ಪ್ರೊ.ಸಿನಾನ್ ಝಕರಿಯಾ ಭಾಗವಹಿಸಿದ್ದರು.
ನಾಗರಿಕ ಸೇವಾ ಪರೀಕ್ಷೆಗಳಾದ IAS / IPS ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಲು ಮುಂದಿನ ವರ್ಷದಿಂದ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ 8, 9 ಮತ್ತು ಪ್ರಥಮ ಪಿಯುಸಿ ತರಗತಿಗಳಿಗೆ IAS / IPS ಪಠ್ಯಕ್ರಮಗಳನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಉತ್ತೇಜಿಸಿ ಆ ಮೂಲಕ ಹೆಚ್ಚಿನ ತರಬೇತಿಗೆ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಸಭೆ ನಿರ್ಧರಿಸಿತು.
ಉಭಯ ಜಿಲ್ಲೆಗಳಲ್ಲಿ ನಡೆಸುತ್ತಿರುವ ಎಸೆಸ್ಸೆಲ್ಸಿ ನಿಧಾನ ಕಲಿಕಾ ಕಾರ್ಯಾಗಾರಗಳು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿರುವುದರಿಂದ ಇದನ್ನು ಮುಂದುವರಿಸಲು, ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಎಪ್ರಿಲ್ ತಿಂಗಳಿನಿಂದ ಯೆನೆಪೊಯ ವಿದ್ಯಾ ಸಂಸ್ಥೆಯ ಸಹಯೋಗದೊಂದಿಗೆ 50 ದಿವಸಗಳ CRASH COURSE ನಡೆಸಲು, ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಮಂಗಳೂರಿನಲ್ಲಿ IBM CERTIFIED COURSE ನಡೆಸಲು ತೀರ್ಮಾನಿಸಲಾಯಿತು.
ಈಗಾಗಲೆ ವಿವಿಧ ವಿದ್ಯಾ ಸಂಸ್ಥೆಗಳಿಂದ ಪ್ರಾಯೋಜಕತ್ವವನ್ನು ಪಡೆದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ 297 ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಮೀಫ್ ಮೂಲಕ ಉಚಿತ ಶಿಕ್ಷಣವನ್ನು ನೀಡುತ್ತಿದೆ. ಈ ಸಂಖ್ಯೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಇನ್ನಷ್ಟು ಹೆಚ್ಚಿಸಿ ಪಿಯುಸಿ ಮತ್ತು ಇಂಜಿನಿಯರಿಂಗ್ ಒಳಗೊಂಡು B.COM
ಕೊಡಗು ಜಿಲ್ಲೆಯ UMMATH ONE ಸಂಸ್ಥೆಯ ಕೋರಿಕೆಯಂತೆ ಮೀಫ್ ಕಾರ್ಯ ವ್ಯಾಪ್ತಿಯನ್ನು ಕೊಡಗು ಜಿಲ್ಲೆಗೆ ವಿಸ್ತರಿಸುವ ನಿಟ್ಟಿನಲ್ಲಿ ಮೀಫ್ ನಿಯೋಗವೊಂದು ಕೊಡಗು ಜಿಲ್ಲೆಗೆ ಶೀಘ್ರವೇ ಭೇಟಿ ನೀಡಿ ಪರಿಶೀಲಿಸಲು ನಿರ್ಧರಿಸಲಾಯಿತು.
ಮುಂದಿನ ವರ್ಷದಿಂದ CLAT (COMMON LAW AWARENESS TEST) ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಜಾಗೃತಿ ಶಿಬಿರ ನಡೆಸಲು ನಿರ್ಧರಿಸಲಾಯಿತು.
ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಅಹ್ಮದ್ ಕಣ್ಣೂರು, ಉಪಾಧ್ಯಕ್ಷರಾದ ಮುಸ್ತಫ ಸುಳ್ಯ ಮತ್ತು ಶಾಬಿ ಅಹ್ಮದ್ ಕಾಝಿ, ಕೋಶಾಧಿಕಾರಿ ನಿಸಾರ್ ಫಕೀರ್ ಮುಹಮ್ಮದ್, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಒಕ್ಕೂಟದ ೮೦ ವಿದ್ಯಾಸಂಸ್ಥೆಗಳ 135 ಪ್ರತಿನಿಧಿಗಳು ಭಾಗವಹಿಸಿದ್ದರು.
ಮೀಫ್ ಕಾರ್ಯಕ್ರಮ ಕಾರ್ಯದರ್ಶಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಪರ್ವೇಝ್ ಅಲಿ ವಂದಿಸಿದರು.